ಕೊರ್ಬಾ (ಛತ್ತೀಸ್ಗಢ) : ತಾಯ್ತನ ಎಂಬುದು ಮಹಿಳೆಯರ ಜೀವನದ ಅತ್ಯಂತ ಸಂತಸದ ಕ್ಷಣಗಳಲ್ಲಿ ಒಂದಾಗಿದೆ. ಹೆರಿಗೆಯ ಮೊದಲು ಮತ್ತು ಹೆರಿಗೆಯ ಸಮಯದಲ್ಲಿ ತಾಯಿ ಅನುಭವಿಸುವ ನೋವು ಪದಗಳಲ್ಲಿ ವರ್ಣಿಸಲಾಗದು. ಜಿಲ್ಲೆಯ ಖಾಸಗಿ ಆಸ್ಪತ್ರೆ ಎನ್‌ಕೆಎನ್‌ನ ಮಹಿಳಾ ವೈದ್ಯರು ಗರ್ಭಿಣಿಯ ಹೆರಿಗೆ ನೋವು ಕಡಿಮೆ ಮಾಡಲು ಹುಡುಕಿದ ನೂತನ ಮಾರ್ಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೆರಿಗೆ ನೋವು ಕಡಿಮೆ ಮಾಡಲು ಗರ್ಭಿಣಿಯ ಜತೆ ನೃತ್ಯ ಮಾಡಿದ ವೈದ್ಯೆ: ವಿಡಿಯೋ ವೈರಲ್ - ಕೊರ್ಬಾದಲ್ಲಿ ಗರ್ಭಿಣಿಯ ಜತೆ ನೃತ್ಯ ಮಾಡಿದ ವೈದ್ಯೆ
ಛತ್ತೀಸ್ಗಢದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ನೋವು ಕಡಿಮೆ ಮಾಡಲು ವೈದ್ಯೆ ಗರ್ಭಿಣಿಯ ಜತೆ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆರಿಗೆಗೆ 10 ನಿಮಿಷಗಳ ಮೊದಲು, ವೈದ್ಯರು ಗರ್ಭಿಣಿಯೊಂದಿಗೆ ನೃತ್ಯ ಮಾಡಿದ್ದಾರೆ. ಗರ್ಭಿಣಿ ಮತ್ತು ಮಹಿಳಾ ವೈದ್ಯರು ಆಪರೇಷನ್ ಥಿಯೇಟರ್‌ನಲ್ಲಿ ನೃತ್ಯ ಮಾಡಿದ ವಿಡಿಯೋ ಸದ್ಯ ವೈರಲ್ ಆಗಿದೆ. ನೃತ್ಯದ ಬಳಿಕ ಮಹಿಳೆ ಯಶಸ್ವಿ ಹೆರಿಗೆ ಮಾಡಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ ಆ ಮಹಿಳೆ.
ಕೊರ್ಬಾದ ಎನ್‌ಕೆಹೆಚ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಜೋತಿ ಶ್ರೀವಾಸ್ತವ ಅವರು ಗರ್ಭಿಣಿ ವಿನಿತಾ ಸೋನಿ ಅವರೊಂದಿಗೆ ನೃತ್ಯ ಮಾಡುವ ವಿಡಿಯೋ ಇದಾಗಿದೆ. ಹೆರಿಗೆಗೆ ಕೇವಲ 10 ನಿಮಿಷಗಳ ಮೊದಲು, ಗರ್ಭಿಣಿ ಮತ್ತು ಮಹಿಳಾ ವೈದ್ಯರು ನೃತ್ಯ ಮಾಡಿದ್ದಾರೆ. ಗರ್ಭಿಣಿ ನೃತ್ಯ ಮಾಡುವುದರಿಂದ ಹೆರಿಗೆ ಸಮಯದಲ್ಲಿ ನೋವು ನಿವಾರಣೆ ಆಗುತ್ತದಂತೆ. ಆದರೆ ಇದಕ್ಕೆ ಸಾಕಷ್ಟು ಎಚ್ಚರಿಕೆಯ ಅಗತ್ಯವಿರುತ್ತದೆ. ಇದಕ್ಕೆ ಉದಾಹರಣೆ ಎಂಬತೆ ವಿನಿತಾ ನೃತ್ಯದ ನಂತರ ಹೆರಿಗೆ ಸಂದರ್ಭದಲ್ಲಿ ಕಡಿಮೆ ನೋವು ಅನುಭವಿಸಿದರಂತೆ.