ಮುರೆನಾ(ಮಧ್ಯ ಪ್ರದೇಶ): ಪೋರ್ಸಾ ಪ್ರದೇಶದಲ್ಲಿ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದ ವೇಳೆಯೇ 4 ಹುಡುಗಿಯರು ಹೊರಬಂದಿದ್ದು, ಅವರನ್ನು ಪೋರ್ಸಾ ತಹಶೀಲ್ದಾರ್ ವಿಚಾರಿಸಿ, ಬಸ್ಕಿ ಹೊಡೆಸಿರುವ ಘಟನೆ ನಡೆದಿದೆ. ಬಸ್ಕಿ ಹೊಡೆದಿರುವ ವಿಡಿಯೋ ತುಣುಕೊಂದು ಲಭ್ಯವಾಗಿದೆ.
ಕೋವಿಡ್ ಕರ್ಫ್ಯೂ ಹಿನ್ನೆಲೆ ತಹಶೀಲ್ದಾರ್ ರಾಜ್‌ಕುಮಾರ್ ನಾಗೌರಿಯಾ, ಸಬ್ಜಿ ಮಂಡಿ ರಸ್ತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ 4 ಮಂದಿ ಹುಡುಗಿಯರು ಒಟ್ಟಾಗಿ ಬರುವುದನ್ನು ಗಮನಿಸಿದ್ದಾರೆ. ಅವರನ್ನು ಅಧಿಕಾರಿ ತಡೆದು ಪ್ರಶ್ನಿಸಿದ್ದಾರೆ. ಈ ವೇಳೆ, ಬ್ಯಾಂಕಿನಿಂದ ಹಣ ಬಿಡಿಸಲು ಹೋಗುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.