ಕರ್ನಾಟಕ

karnataka

By

Published : Sep 21, 2021, 11:04 AM IST

ETV Bharat / bharat

ತನಿಖೆ ವೇಳೆ ಬಯಲು... ರಾಜ್​ ಕುಂದ್ರಾ ಮೊಬೈಲ್​, ಲ್ಯಾಪ್​ನಲ್ಲಿ 119 ಪೋರ್ನ್​ ವಿಡಿಯೋಗಳು ಪತ್ತೆ!

ಉದ್ಯಮಿ ರಾಜ್​ಕುಂದ್ರಾ ಮೊಬೈಲ್, ಲ್ಯಾಪ್​ಟಾಪ್​ಗಳಲ್ಲಿ 119 ಪೋರ್ನ್ ವಿಡಿಯೋಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್​ ಕುಂದ್ರಾ
ರಾಜ್​ ಕುಂದ್ರಾ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ಕುಂದ್ರಾ ಅವರ ಮೇಲಿನ ಅಶ್ಲೀಲ ವಿಡಿಯೋ ಚಿತ್ರೀಕರಣ ಆರೋಪ ಪ್ರಕರಣ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ರಾಜ್​ಕುಂದ್ರಾ ಅವರ ಮೊಬೈಲ್, ಲ್ಯಾಪ್​​ಟಾಪ್, ಹಾರ್ಡ್​ ಡಿಸ್ಕ್​ ಡ್ರೈವ್​ನಲ್ಲಿ 119 ಪೋರ್ನ್​ ವಿಡಿಯೋ(ಅಶ್ಲೀಲ ವಿಡಿಯೋ)ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆತ ಈ ವಿಡಿಯೋಗಳನ್ನು 9 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜಿಸುತ್ತಿದ್ದ ಎಂದು ಮುಂಬೈ ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ.

ಅಶ್ಲೀಲ ಚಿತ್ರಗಳ ತಯಾರಿಕೆ ಸಂಬಂಧ ಬಂಧಿಯಾಗಿದ್ದ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್‌, 50 ಸಾವಿರ ರೂ ಮೊತ್ತದ ಶೂರಿಟಿ ಬಾಂಡ್​ ಪಡೆದು ಬೇಲ್ ನೀಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ಇತ್ತೀಚೆಗೆ ಕುಂದ್ರಾ ವಿರುದ್ಧ 1,400 ಪುಟಗಳ ಚಾರ್ಜ್​​ಶೀಟ್ ಅನ್ನು ನ್ಯಾಯಾಲಯಕ್ಕೆ​ ಸಲ್ಲಿಸಿದ್ದರು. ಅಲ್ಲದೇ ಅಧಿಕಾರಿಗಳು, ನಟಿ ಶಿಲ್ಪಾಶೆಟ್ಟಿ ಸೇರಿ 43 ಸಾಕ್ಷಿಗಳ ಹೇಳಿಕೆಗಳನ್ನು ಪಟ್ಟಿ ಮಾಡಿದ್ರು.

ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಕುಂದ್ರಾ

ಬಳಿಕ ರಾಜ್​ ಕುಂದ್ರಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೆ ನೀಡಿದ್ದರು. ರಾಜ್​ ಕುಂದ್ರಾ ಇದರಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಜಾಮೀನು ನೀಡುವಂತೆ ಉದ್ಯಮಿಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಇವರ ಮನವಿ ಆಲಿಸಿದ ನ್ಯಾಯಾಲಯ ಜಾಮೀನು ನೀಡಿದೆ.

ಇದನ್ನೂ ಓದಿ: ಉದ್ಯಮಿ ರಾಜ್​ ಕುಂದ್ರಾಗೆ ಜಾಮೀನು ಮಂಜೂರು

ಅಶ್ಲೀಲ ಚಿತ್ರ ನಿರ್ಮಾಣ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಉದ್ಯಮಿ ರಾಜ್​ ಕುಂದ್ರಾ ಸೇರಿದಂತೆ ನಾಲ್ವರನ್ನು ಮುಂಬೈ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಜುಲೈ 19ರಂದು ಬಂಧಿಸಿದ್ದರು.

For All Latest Updates

ABOUT THE AUTHOR

...view details