ಕರ್ನಾಟಕ

karnataka

ETV Bharat / bharat

ಬ್ರಿಕ್ಸ್ ಶೃಂಗಸಭೆಯಿಂದ ಮೋದಿ ದೂರವಿರಬೇಕು, ಉಕ್ರೇನ್​ ಪರ ಭಾರತ ನಿಲ್ಲಬೇಕು: ಸುಬ್ರಮಣಿಯನ್ ಸ್ವಾಮಿ - ಬ್ರಿಕ್ಸ್ ಶೃಂಗಸಭೆ

'ಈಟಿವಿ ಭಾರತ್‌'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಉಕ್ರೇನ್​ ಮತ್ತು ರಷ್ಯಾ ಯುದ್ಧ, ಚೀನಾದಲ್ಲಿ ನಡೆಯುವ ಬ್ರಿಕ್ಸ್​ ಸಭೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಸುಬ್ರಮಣಿಯನ್ ಸ್ವಾಮಿ ಮುಕ್ತವಾಗಿ ಮಾತನಾಡಿದ್ದಾರೆ.

subramanian swamy
subramanian swamy

By

Published : Mar 30, 2022, 1:59 PM IST

Updated : Mar 30, 2022, 2:51 PM IST

ನವದೆಹಲಿ: ಉಕ್ರೇನ್​ ಮೇಲೆ ಯುದ್ಧ ಸಾರಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಜಾಸತ್ತಾತ್ಮಕವಾದ ನಾಯಕನಲ್ಲ. ಉಕ್ರೇನ್ ಪ್ರದೇಶವನ್ನು ವಶಪಡಿಸಿಕೊಳ್ಳಲು ಪುಟಿನ್​ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಅಂತಾರಾಷ್ಟ್ರೀಯ ನಿಯಮಗಳು ಮತ್ತು ಶಿಷ್ಠಾಚಾರಗಳನ್ನು ಅವರು ಧಿಕ್ಕರಿಸುತ್ತಿದ್ದಾರೆ. ಪುಟಿನ್​ ಅವರನ್ನು 'ಸರ್ವಾಧಿಕಾರಿ" ಎಂದು ಕರೆಯಲು ನಾನು ಹಿಂಜರಿಯಲ್ಲ.

ಇವು ರಾಜ್ಯಸಭಾ ಸದಸ್ಯ, ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಹೆಸರಾಗಿರುವ ಸುಬ್ರಮಣಿಯನ್ ಸ್ವಾಮಿ ಅವರ ಸ್ಪಷ್ಟನುಡಿಗಳು. 'ಈಟಿವಿ ಭಾರತ್‌'ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಉಕ್ರೇನ್​ ಮತ್ತು ರಷ್ಯಾ ಯುದ್ಧ, ಚೀನಾದಲ್ಲಿ ನಡೆಯುವ ಬ್ರಿಕ್ಸ್​ ಸಭೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಬೆಳವಣಿಗೆಗಳ ಅವರು ಮುಕ್ತವಾಗಿ ಮಾತನಾಡಿದ್ದಾರೆ.

ಪುಟಿನ್ ಸರ್ವಾಧಿಕಾರಿ - ಸುಬ್ರಮಣಿಯನ್​ ಸ್ವಾಮಿ:ಉಕ್ರೇನ್​ನಲ್ಲಿ ರಷ್ಯಾ ತನ್ನ ಸೇನಾ ಕಾರ್ಯಾಚರಣೆ ಆರಂಭಿಸಿ ಒಂದು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಸಾವಿರಾರು ಜನರು ಮೃತಪಟ್ಟಿದ್ದು, ಉಕ್ರೇನ್‌ನಿಂದ ಸುಮಾರು 4 ಮಿಲಿಯನ್ ಜನರನ್ನು ಒತ್ತಾಯ ಮಾಡಿ ಬೇರೆಡೆ ಪಲಾಯನ ಮಾಡಿಸಲಾಗಿದೆ. ಅಂದಾಜು 10 ಮಿಲಿಯನ್ ಆ ದೇಶದಲ್ಲೇ ಬೇರೆ ಕಡೆಗೆ ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಈ ಅಂತಾರಾಷ್ಟ್ರೀಯ ಸಂಘರ್ಷದ ಬಗ್ಗೆ ಭಾರತದ ನಿಲುವು ಇಲ್ಲಿಯವರೆಗೆ ಸರಿಯಾಗಿದೆ ಎನ್ನಲಾಗಿದೆ. ಆದರೆ, ಸುಬ್ರಮಣಿಯನ್ ಸ್ವಾಮಿ, ಉಕ್ರೇನ್​ ಮೇಲೆ ಅಪ್ರಚೋದಿತ ಯುದ್ಧವನ್ನು ಸಾರಿರುವ ಪುಟಿನ್ ಅವರನ್ನು 'ಸರ್ವಾಧಿಕಾರಿ' ಎಂದು ಕರೆಯಲು ಹಿಂಜರಿವುದಿಲ್ಲ ಎಂದು ಹೇಳಿದ್ದಾರೆ.

ಪ್ರಜಾಸತ್ತಾತ್ಮಕವಾದ ನಾಯಕನಲ್ಲ:ಸೋವಿಯತ್ ಒಕ್ಕೂಟವಾಗಿದ್ದಾಗ ಸೂಪರ್ ಪವರ್ ಎಂದು ಪರಿಗಣಿಸಲ್ಪಟ್ಟ ರಾಷ್ಯದಿಂದ ಅಪ್ರಚೋದಿತ ದಾಳಿಯಾಗಿದೆ. ಯುಎಸ್ಎಸ್ಆರ್ ಪತನದ ನಂತರ ರಷ್ಯಾ ಕೂಡ ಸೋವಿಯತ್ ಒಕ್ಕೂಟದ ಒಂದು ಭಾಗವಾಗಿದೆ ಅಷ್ಟೇ. ತನ್ನ ಸೇನೆಯ ಆಕ್ರಮಣದೊಂದಿಗೆ ಪುಟಿನ್​ ಪ್ರಜಾಸತ್ತಾತ್ಮಕವಾದ ನಾಯಕನಲ್ಲ ಎಂಬುವುದನ್ನು ನಿರೂಪಿಸಿದ್ದಾರೆ. ನಾವು (ಭಾರತ) ಉಕ್ರೇನ್ ಪರವಾಗಿ ನಿಲ್ಲಬೇಕಿತ್ತು ಎಂದು ಇದೇ ವೇಳೆ ಅವರು ಅಭಿಪ್ರಾಯಪಟ್ಟರು.

ಪ್ರಸ್ತುತ ಯುದ್ಧ ಪರಿಸ್ಥಿತಿಯಲ್ಲಿ ವಿಶ್ವಸಂಸ್ಥೆಯ ಪಾತ್ರದ ಕುರಿತಂತೆ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ, ವಿಶ್ವಸಂಸ್ಥೆಯು ಚರ್ಚಿಸುವ ಸ್ಥಳವಾಗಿದೆಯೇ ಹೊರತು ನಿರ್ಧಾರಗಳು ತೆಗೆದುಕೊಳ್ಳಲು ಅಲ್ಲ. ಅದು ಗಂಭೀರ ಕ್ರಮದ ನಿರ್ಧಾರ ತೆಗೆದುಕೊಳ್ಳುವ ಸ್ಥಳವಲ್ಲ ಎಂದು ನಾನು ಭಾವಿಸಿದ್ದೇನೆ. ವಿಶ್ವಸಂಸ್ಥೆ ತನ್ನ ಶಾಂತಿಪಾಲನಾ ಪಡೆಗಳ ಮೂಲಕ ಸಣ್ಣ ರಾಷ್ಟ್ರಗಳಿಗೆ ಏನಾದರೂ ಸಮಸ್ಯೆಯಿದ್ದರೆ ಮಾತ್ರ ತನ್ನ ಸೈನ್ಯವನ್ನು ಕಳುಹಿಸುತ್ತದೆ. ಪಿ-5 (ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರಗಳು)ಗೆ ವಿಷಯಕ್ಕೆ ಬಂದರೂ, ಇದು ಅಷ್ಟೊಂದು ಪರಿಣಾಮಕಾರಿಯಲ್ಲ. ರಷ್ಯಾದ ಸದಸ್ಯತ್ವವೇ ಕಾನೂನು ಬಾಹಿರವಾಗಿದೆ ಎಂದರು.

ಜೂನ್‌ನಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ಮತ್ತು ಪ್ರಧಾನಿ ಮೋದಿ ಅದರಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಸುಬ್ರಮಣಿಯನ್ ಸ್ವಾಮಿ, 'ಅವರಿಗೆ (ಮೋದಿ) ಯಾವುದೇ ಸ್ವಾಭಿಮಾನವಿದ್ದರೆ, ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಕ್ವಾಡ್ ಮತ್ತು ಬ್ರಿಕ್ಸ್‌ ಎರಡರಲ್ಲೂ ಹೇಗೆ ಇರಲು ಸಾಧ್ಯ? ಎಂದು ಪ್ರಶ್ನಿಸಿದರು.

ಅಲ್ಲದೇ, ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಭಾರತದ ನಿಲುವು ಮತ್ತು ನೀತಿಯನ್ನು ಪ್ರಶ್ನಿಸಿದ ಅವರು, ನಮಗೆ ನೀತಿ ಇದೆಯೇ?. ಭಾರತ ಅಲ್ಲಿ ಹೂಡಿಕೆ ಮಾಡಿತ್ತು. ಮೂಲಸೌಕರ್ಯ ಕಲ್ಪಿಸಿ ಸಂಸತ್ತನ್ನು ನಿರ್ಮಿಸಿತ್ತು. ಆದರೆ, ಅಮೆರಿಕ ಹಿಂದೆ ಸರಿಯಲು ನಿರ್ಧರಿಸಿದಾಗ ಎಲ್ಲರನ್ನೂ ಹಿಂದಕ್ಕೆ ಕರೆಯಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Last Updated : Mar 30, 2022, 2:51 PM IST

ABOUT THE AUTHOR

...view details