ನವದೆಹಲಿ :ಲಸಿಕೆ ಹಾಕಿದ್ರಾ? ಚುಚ್ಚಿದ್ದೇ ಗೊತ್ತಾಗಿಲ್ಲ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನಲ್ಲಿ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ನರ್ಸ್ಗಳ ಬಳಿ ಹೇಳಿದ್ದಾರೆ.
ಏಮ್ಸ್‌ನಲ್ಲಿ ನರ್ಸ್ ಅಗಿ ಸೇವೆ ಸಲ್ಲಿಸುತ್ತಿರುವ ಪುದುಚೇರಿ ಮೂಲದ ಪಿ ನಿವೇದಾ, ಪಿಎಂ ಮೋದಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಡೋಸ್‌ನ ನೀಡಲಾಗಿದೆ. ಇವರಿಗೆ ರೋಸಮ್ಮ ಅನಿಲ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿವೇದಾ, 'ಲಗಾ ದಿಯಾ? ಪತಾ ಭೀ ನಹೀ ಚಲಾ' ಎಂದು ಲಸಿಕೆ ಹಾಕಿಸಿಕೊಂಡ ಬಳಿಕ ಪ್ರಧಾನಿ ನಮ್ಮ ಬಳಿ ಹೇಳಿದರು ಎಂದರು.
ಪಿಎಂ ಮೋದಿಗೆ ಲಸಿಕೆ ಹಾಕಿದ ನರ್ಸ್ ಪ್ರತಿಕ್ರಿಯೆ ಭಾರತವನ್ನು ಕೊರೊನಾ ಮುಕ್ತವನ್ನಾಗಿಸಿ :ಖುಷಿಯಿಂದ ವ್ಯಾಕ್ಸಿನ್ ಪಡೆಯುತ್ತಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮೋದಿ, ನಾನು ಕೋವಿಡ್ ಲಸಿಕೆಯ ಮೊದಲ ಡೋಸ್‌ನ ಏಮ್ಸ್‌ನಲ್ಲಿ ಹಾಕಿಸಿಕೊಂಡಿರುವೆ. ಕೊರೊನಾ ವಿರುದ್ಧದ ವಿಶ್ವದ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು, ವಿಜ್ಞಾನಿಗಳು ಅತಿ ಕಡಿಮೆ ಸಮಯದಲ್ಲಿ ಕೆಲಸ ಮಾಡಿರುವುದು ಗಮನಾರ್ಹವಾಗಿದೆ. ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೊರೊನಾ ಮುಕ್ತವನ್ನಾಗಿಸಿ ಎಂದು ಮನವಿ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೋವ್ಯಾಕ್ಸಿನ್ ಲಸಿಕೆ ತಯಾರಿಸಿದೆ. ಇಂದಿನಿಂದ ದೇಶದಲ್ಲಿ ಎರಡನೇ ಹಂತದ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 1,43,01,266 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ.