ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಸ್ವಲ್ಪ ಸಮಯದ ನಂತರ ಖಾತೆ ಹ್ಯಾಕ್ ಆಗಿರುವುದನ್ನು ಸರಿಪಡಿಸಿದಾಗ ಬಿಟ್‌ಕಾಯಿನ್ ಮಾನ್ಯತೆ ನೀಡಿರುವ ಬಗ್ಗೆ ಟ್ವೀಟ್ವೊಂದನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದ್ದು, ಬಳಿಕ ಅದನ್ನು ಖಾತೆಯಿಂದ ಡಿಲಿಟ್ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ PMO India, 'Narendra Modi ಟ್ವಿಟರ್ ಖಾತೆಯಲ್ಲಿ ಉಂಟಾದ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಬಗ್ಗೆ ಟ್ವಿಟರ್ಗೆ ಮಾಹಿತಿ ನೀಡಲಾಗಿದ್ದು, ತಕ್ಷಣ ಖಾತೆಯನ್ನು ಸುರಕ್ಷಿತಗೊಳಿಸಲಾಗಿದೆ. ಸಮಸ್ಯೆ ಉಂಟಾದ ಕೆಲ ಸಮಯದ ಅವಧಿಯಲ್ಲಿ ಪೋಸ್ಟ್ ಆದ ಟ್ವೀಟ್ ಅನ್ನು ಪರಿಗಣಿಸದಿರಿ' ಎಂದು ತಿಳಿಸಲಾಗಿದೆ
ಶನಿವಾರ ತಡರಾತ್ರಿ ಹ್ಯಾಕ್ ಮಾಡಿರುವ ಸೈಬರ್ ಖದೀಮರು, ಖಾತೆಯು ಸುರಕ್ಷಿತವಾಗುವ ಪ್ರಕ್ರಿಯೆಯೊಳಗೆ ಒಂದು ಟ್ವೀಟ್ ಪೋಸ್ಟ್ ಮಾಡಿದ್ದಾರೆ. 'ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಚಲಾವಣೆಗೆ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ. ಸರ್ಕಾರವು ಅಧಿಕೃತವಾಗಿ 500 ಬಿಟ್‌ಕಾಯಿನ್ ಖರೀದಿಸಿದ್ದು, ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ಹಂಚಲಿದೆ' ಎಂದು Narendra Modi ಟೈಮ್‌ಲೈನ್‌ನಲ್ಲಿ URLನೊಂದಿಗೆ ಟ್ವೀಟ್ ಪೋಸ್ಟ್ ಮಾಡಲಾಗಿತ್ತು.
ಹ್ಯಾಕ್ ಆದ ಕೆಲ ಸಮಯದಲ್ಲೇ ಸಮಸ್ಯೆ ಪರಿಹರಿಸಿದ್ದರೂ ಕೂಡ ಅದೇ ಅವಧಿಯಲ್ಲೇ ಪೋಸ್ಟ್ ಆದ ಈ ಟ್ವೀಟ್ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗಿದೆ. ಎಲ್ಲಡೆ ನೆಟಿಜನ್ಸ್ ತರಹೇವಾರಿ ಟ್ವೀಟ್, ಪ್ರತಿಕ್ರಿಯೆಗಳ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ಸುಂಟರಗಾಳಿ ಅಬ್ಬರಕ್ಕೆ ಅಮೆರಿಕದ 6 ರಾಜ್ಯಗಳು ತತ್ತರ... ಹಲವೆಡೆ ಹಾನಿ, ನೂರಾರು ಸಾವು-ನೋವು