ನವದೆಹಲಿ: ದೆಹಲಿ ಮೆಟ್ರೋದ ಮೆಜೆಂಟಾ ಲೈನ್ನಲ್ಲಿ ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ.
ದೇಶದ ಮೊದಲ ಚಾಲಕರಹಿತ ರೈಲು ಸೇವೆಗೆ ನಾಳೆ ಮೋದಿ ಚಾಲನೆ
ದೆಹಲಿ ಮೆಟ್ರೋದ ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಳೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 'ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್' (ಎನ್‌ಸಿಎಂಸಿ) ಅನ್ನು ಅವರು ಬಿಡುಗಡೆ ಮಾಡಲಿದ್ದಾರೆ.
ಈ ಸೇವೆಯಿಂದ ಪ್ರಪಂಚದಲ್ಲಿರುವ ಅತಿ ಕಡಿಮೆ ಚಾಲಕರಹಿತ ರೈಲು ಚಾಲನೆ ಸೇವೆಯ ಪಟ್ಟಿಗೆ ಭಾರತ ಸೇರಲಿದೆ. 2021ಕ್ಕೆ 57 ಕಿಲೋ ಮೀಟರ್ ಉದ್ದದ ಪಿಂಕ್ ಲೈನ್ (ಮಜ್ಲಿಸ್ ಪಾರ್ಕ್-ಶಿವ ವಿಹಾರ) ಮಧ್ಯೆ ಚಾಲಕ ರಹಿತ ರೈಲು ಚಾಲನೆಗೆ ಸರ್ಕಾರ ಮುಂದಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ಪೋರ್ಟ್ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿರುವ 'ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್' ಸಹ ಒಂದು ಪ್ರಮುಖ ಮೈಲಿಗಲ್ಲಾಗಲಿದೆ. ಕಳೆದ 18 ತಿಂಗಳುಗಳಲ್ಲಿ 23 ಬ್ಯಾಂಕುಗಳು ಇತ್ತೀಚೆಗೆ ನೀಡಿರುವ ರುಪೇ-ಡೆಬಿಟ್ ಕಾರ್ಡ್ ಅನ್ನು ಹೊಂದಿರುವವರು, ದೇಶದ ಯಾವುದೇ ಭಾಗದಿಂದ ಆ ಕಾರ್ಡ್ ಬಳಸಿ ವಿಮಾನ ನಿಲ್ದಾಣ ಎಕ್ಸ್‌ಪ್ರೆಸ್ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ.