ಕರ್ನಾಟಕ

karnataka

By

Published : Dec 6, 2020, 4:23 AM IST

ETV Bharat / bharat

ಡಿ.7ಕ್ಕೆ ಆಗ್ರ ಮೆಟ್ರೋ ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ

ಅಂದಾಜು 8,379.62 ಕೋಟಿ ರೂ. ವೆಚ್ಚದ ಆಗ್ರ ಮೆಟ್ರೋ ಕಾಮಗಾರಿಗೆ ಡಿ.7 ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

PM Modi to inaugurate construction work of Agra metro project
ಆಗ್ರ ಮೆಟ್ರೋ ನಿರ್ಮಾಣ ಕಾಮಗಾರಿಗೆ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿ.7 ರಂದು ಆಗ್ರ ಮೆಟ್ರೋ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಆಗ್ರಾದ 15ನೇ ಬೆಟಾಲಿಯನ್ ಪಿಎಸಿ ಪೆರೇಡ್ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.

ಆಗ್ರಾ ಮೆಟ್ರೋ ಯೋಜನೆಯು ಒಟ್ಟು 29.4 ಕಿ.ಮೀ ಉದ್ದದ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದೆ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಗಳಾದ ತಾಜ್​ ಮಹಲ್, ಆಗ್ರಾ ಕೋಟೆ, ಸಿಕಂದ್ರವನ್ನು ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

ನಗರದ 26 ಲಕ್ಷ ನಿವಾಸಿಗಳಿಗೆ ಅನುಕೂಲವಾಗುವುದರ ಜೊತೆಗೆ, ಪ್ರತಿ ವರ್ಷ ಆಗ್ರಾಗೆ ಭೇಟಿ ನೀಡುವ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರಿಗೆ ಈ ಯೋಜನೆ ನೆರವಾಗಲಿದೆ. ಯೋಜನೆಯ ಅಂದಾಜು ವೆಚ್ಚ 8,379.62 ಕೋಟಿ ರೂ. ಆಗಿದ್ದು, ಇದು 5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ABOUT THE AUTHOR

...view details