ಕರ್ನಾಟಕ

karnataka

ETV Bharat / bharat

ಸಿದ್ಧವಾದ 296 ಕಿಮೀ ಉದ್ದದ ಹೆದ್ದಾರಿ.. ಇಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ - ಬುಂದೇಲ್​ಖಂಡದ ಚತುಷ್ಪಥ ರಸ್ತೆ

ಬುಂದೇಲಖಂಡದ 296 ಕಿಮೀ ಉದ್ದದ ಚತುಷ್ಪಥ ರಸ್ತೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಇಂದು ಉದ್ಘಾಟನೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಉತ್ತರಪ್ರದೇಶದ ಅಧಿಕಾರಿಗಳು ಭಾಗಿ.

ಇಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ
ಇಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ

By

Published : Jul 16, 2022, 9:25 AM IST

ಲಖನೌ:ಸಂಪರ್ಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನಕಾರಿಯಾಗಿರುವ ಉತ್ತರಪ್ರದೇಶದ ಬುಂದೇಲ್​ಖಂಡದಲ್ಲಿ ನಿರ್ಮಿಸಲಾಗಿರುವ 296 ಕಿಮೀ ಉದ್ದದ ಚತುಷ್ಪಥ ಎಕ್ಸ್​ಪ್ರೆಸ್​ ವೇ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟನೆ ಮಾಡಲಿದ್ದಾರೆ.

ಬುಂದೇಲ್​ಖಂಡದಲ್ಲಿ ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿ.ಮೀ ಚತುಷ್ಪಥ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಇದು ದೇಶದ ಉದ್ದದ ಚತುಷ್ಪಥಗಳಲ್ಲಿ ಒಂದಾಗಿದೆ.

ಸಿದ್ಧವಾದ 296 ಕಿಮೀ ಉದ್ದದ ಹೆದ್ದಾರಿ

ಫೆಬ್ರವರಿ 29, 2020 ರಂದು ಪ್ರಧಾನಿ ಮೋದಿ ಅವರು ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಈ ಯೋಜನೆಯನ್ನು 28 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ. ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಡಿ ಸುಮಾರು14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿಮೀ ಉದ್ದದಲ್ಲಿ ನಿರ್ಮಿಸಲಾಗಿದೆ, ಇದನ್ನು ಮುಂದೆ ಆರು ಪಥಗಳಾಗಿ ವಿಸ್ತರಿಸಬಹುದಾಗಿದೆ.

ಈ ಎಕ್ಸ್​ಪ್ರೆಸ್​ವೇ ಸಂಪರ್ಕವನ್ನು ಸುಧಾರಿಸುವುದರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡಲಿದೆ. ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ರಚನೆಯ ಕೆಲಸ ಈಗಾಗಲೇ ಶುರುವಾಗಿದೆ.

ಓದೀ:ಗುರು ಗ್ರಹದಂತಹ ಹಾಟ್​ ಗ್ರಹಗಳನ್ನು ಪತ್ತೆ ಮಾಡಿದ ಗಯಾ ಬಾಹ್ಯಾಕಾಶ ನೌಕೆ!

ABOUT THE AUTHOR

...view details