ಉನಾ (ಹಿಮಾಚಲ ಪ್ರದೇಶ): ದೇಶದ ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಿಮಾಚಲ ಪ್ರದೇಶದ ಉನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ (ಗುರುವಾರ) ಚಾಲನೆ ನೀಡಲಿದ್ದಾರೆ. ಉನಾ ಮತ್ತು ದೆಹಲಿ ನಡುವಿನ ಈ ಎಕ್ಸ್‌ಪ್ರೆಸ್ ರೈಲು ಚಂಡೀಗಢ ಮೂಲಕ ಕೇವಲ ಐದು ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿಯನ್ನು ತಲುಪಲಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಚಂಬಾದಲ್ಲಿ ಅಕ್ಟೋಬರ್ 13ರಂದು ತಮ್ಮ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗಲಿದ್ದಾರೆ. ಜೊತೆಗೆ ಉನಾದಲ್ಲಿ ಬಲ್ಕ್ ಡ್ರಗ್ ಫಾರ್ಮಾ ಪಾರ್ಕ್‌ಗೆ ಶಂಕುಸ್ಥಾಪನೆ ಮತ್ತು ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:100 ಕಿಮೀ ವೇಗದಲ್ಲಿ ಚಲಿಸಿ.. ವ್ಹೀಲ್ ಜಾಮ್ ಆಗಿ ನಿಂತ ವಂದೇ ಭಾರತ್ ರೈಲು
ಈ ಮೊದಲು ಪ್ರಧಾನಿ ಮೋದಿ ಚಂಬಾ ನಡೆಯುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಇಂದು ಹೊಸ ಬೆಳವಣಿಗೆ ಕಂಡು ಬಂದಿದೆ. ಚಂಬಾಗೆ ತೆರಳುವ ಮೊದಲು ಪ್ರಧಾನಿ ಉನಾಗೆ ಭೇಟಿ ನೀಡಲಿದ್ದಾರೆ. ಚಂಬಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ಸಿಎಂ ಠಾಕೂರ್ ತಿಳಿಸಿದರು.