ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಈ ವರ್ಷದ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಬೆನ್ನಲ್ಲೆ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಬಹುದು ಎನ್ನಲಾಗಿದೆ. ಆದರೆ, ಈ ಪ್ರವಾಸದ ಸಮಯ ಇನ್ನೂ ನಿಗದಿಯಾಗಬೇಕಿದೆ.
ಇದಕ್ಕೂ ಮೊದಲು 12 ಮತ್ತು 13ರಂದು ನಡೆದ ಜಿ 7ಶೃಂಗಸಭೆಯ ಅಧಿವೇಶನದಲ್ಲಿ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಹಾಜರಾಗಿದ್ದರು. ಅಲ್ಲದೆ ಕೊರೊನಾ ಹೆಚ್ಚುತ್ತಿರುವ ವೇಳೆ ಜಿ7 ಶೃಂಗಸಭೆಗಾಗಿ ಬ್ರಿಟನ್ಗೆ ತೆರಳಿರಲಿಲ್ಲ. ಬದಲಿಗೆ ವರ್ಚುವಲ್ನಲ್ಲಿ ಭಾಗಿಯಾಗಿದ್ದರು. ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಸೆಪ್ಟೆಂಬರ್ ಅಥವಾ ನವೆಂಬರ್ನಲ್ಲಿ ಪ್ರವಾಸ ಕೈಗೊಳ್ಳಬಹುದು ಎಂದು ವರದಿಯಾಗಿದೆ.