ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯ ಮತ್ತು ವರ್ಷದ ಕೊನೆಯ ಮನ್ ಕಿ ಬಾತ್ ಆವೃತ್ತಿಯಲ್ಲಿ ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿದರು. 75 ವರ್ಷಗಳ ಅಮೃತ ಮಹೋತ್ಸವವು ಅದ್ಭುತವಾಗಿದೆ. ದೇಶಕ್ಕೆ ಅಮೃತಗಳಿಗೆ ಆರಂಭವಾಗಿದೆ. 220 ಕೋಟಿ ಕೊರೊನಾ ಲಸಿಕೆ ಡೋಸ್, 400 ಬಿಲಿಯನ್ ಡಾಲರ್ ವಿವಿಧ ರಫ್ತು ನಡೆಸಿ ವಿಶ್ವದಲ್ಲಿಯೇ ಭಾರತ ಐದನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು.
ಆತ್ಮನಿರ್ಭರದ ಭಾಗವಾಗಿ ನಿರ್ಮಿಸಲಾದ ಸ್ವದೇಶಿ ಐಎನ್ಎಸ್ ವಿಕ್ರಾಂತ್ಗೆ ಚಾಲನೆ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯ ಕಾರ್ಯಾರಂಭವು 75 ವರ್ಷಗಳ ಸ್ವಾತಂತ್ರ್ಯದ 'ಅಮೃತಕಾಲ'ವಾಗಿದೆ. ಇದು ದೇಶದ ಆತ್ಮವಿಶ್ವಾಸ ಮತ್ತು ಪರಾಕ್ರಮವನ್ನು ಸೂಚಿಸುತ್ತದೆ. ಈ ಸ್ವದೇಶಿ ನೌಕೆ ತಯಾರಿ ದೇಶದ ತಾಂತ್ರಿಕತೆ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಪುರಾವೆಯಾಗಿದೆ ಎಂದು ಹೊಗಳಿದರು.
ಸುಮಾರು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಐಎನ್ಎಸ್ ವಿಕ್ರಾಂತ್ ಕಳೆದ ತಿಂಗಳು ಸೇನೆಗೆ ಸೇರ್ಪಡೆಯಾಯಿತು. ವಿಕ್ರಾಂತ್ ನಿರ್ಮಾಣದೊಂದಿಗೆ ದೇಶ ದೇಶೀಯವಾಗಿ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯದ ಆಯ್ದ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಯಾಯಿತು ಎಂದರು.