ಭುವನೇಶ್ವರ/ಪುರಿ:ಒಡಿಶಾಗೆ ಮೊದಲನೆಯದು ಮತ್ತು 17ನೇ ಆವೃತ್ತಿಯ ಬಹುನಿರೀಕ್ಷಿತ ಪುರಿ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರುವ ನಿಶಾನೆ ತೋರಿ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಒಡಿಶಾದಲ್ಲಿ ರೂ 8,000 ಕೋಟಿಗೂ ಹೆಚ್ಚು ಮೌಲ್ಯದ ಹಲವು ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟಿಸಿದ ನಂತರ ಅತ್ಯಾಧುನಿಕ ಪ್ಯಾಸೆಂಜರ್ ಸೌಕರ್ಯಗಳನ್ನು ಹೊಂದಿರುವ ಅಲ್ಟ್ರಾ - ಆಧುನಿಕ ಸೆಮಿ-ಹೈ-ಸ್ಪೀಡ್ ರೈಲಿಗೆ ಪ್ರಧಾನಮಂತ್ರಿ ಚಾಲನೆ ನೀಡಿದರು.
ಕಟಕ್ ಮತ್ತು ಪುರಿ ರೈಲು ನಿಲ್ದಾಣಗಳ ನವೀಕರಣ, ಒಡಿಶಾದ ಪ್ರಗತಿಯನ್ನು ವೇಗಗೊಳಿಸುವುದು ಸೇರಿದಂತೆ ಹಲವಾರು ಪರಿವರ್ತಕ ಯೋಜನೆಗಳನ್ನು ಮೋದಿ ಪ್ರಾರಂಭಿಸಿದರು. ಮರು - ಅಭಿವೃದ್ಧಿಪಡಿಸಿದ ನಿಲ್ದಾಣಗಳು ರೈಲು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವವನ್ನು ಒದಗಿಸುವ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುತ್ತದೆ.
ಭಾರತದ ಪ್ರಗತಿಯ ವೇಗ ಪ್ರತಿನಿಧಿಸುತ್ತೆ ವಂದೇ ಭಾರತ್ ಎಕ್ಸ್‌ಪ್ರೆಸ್ - ಮೋದಿ:ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ''ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುವಾಗ, ಅದು ಭಾರತದ ಪ್ರಗತಿಯ ವೇಗವನ್ನು ಪ್ರತಿನಿಧಿಸುತ್ತದೆ'' ಎಂದು ಹೇಳಿದರು. ಒಡಿಶಾ ಮತ್ತು ಪಶ್ಚಿಮ ಬಂಗಾಳದ ಜನರು ವಂದೇ ಭಾರತ್ ರೈಲಿನ ಲಾಭವನ್ನು ಪಡೆಯುತ್ತಿದ್ದಾರೆ. ಇದು ಆಧುನಿಕ ಭಾರತ ಮತ್ತು ಮಹತ್ವಾಕಾಂಕ್ಷೆಯ ಭಾರತೀಯರ ಸಂಕೇತವಾಗಿದೆ'' ಎಂದು ಮೋದಿ ಹೇಳಿದರು.
ಪ್ರಸ್ತುತ ‘ಅಮ್ರಿಲ್ ಕಾಲ್’ ಭಾರತದ ಏಕತೆಯನ್ನು ಮತ್ತಷ್ಟು ಬಲಪಡಿಸುವ ಸಮಯ ಎಂದ ಅವರು, ಹೆಚ್ಚಿನ ಏಕತೆ, ದೇಶದ ಸಾಮೂಹಿಕ ಶಕ್ತಿ ಹಾಗೂ ಈ ವಂದೇ ಭಾರತ್ ರೈಲುಗಳು ಈ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದರು. ನವೀನ್ ಪಟ್ನಾಯಕ್ ಅವರು ಪುರಿ ಮತ್ತು ಹೌರಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ಪ್ರಾರಂಭಿಸಿರುವುದು ಸಂತೋಷದ ವಿಷಯವಾಗಿದೆ. ಈ ಉಪಕ್ರಮಕ್ಕಾಗಿ ಅವರು ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.