ಕರ್ನಾಟಕ

karnataka

ETV Bharat / bharat

'ಜೈ ಶ್ರೀ ರಾಮ್ ಘೋಷಣೆ ಕೂಗುವುದು ಅಪರಾಧವೇ? ಮಮತಾ ದೀದಿಗೆ ಗೋಯಲ್ ಪ್ರಶ್ನೆ - ಪಿಯೂಷ್ ಗೋಯಲ್

ಕೇಂದ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದ್ದರೇ ಎರಡೂ ಸರ್ಕಾರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿವೆ ಎಂದರು. ಕೋಲ್ಕತ್ತಾದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಮಾತನಾಡಲು ನಿರಾಕರಿಸಿದ ಘಟನೆ ಉಲ್ಲೇಖಿಸಿ, 'ಜೈ ಶ್ರೀ ರಾಮ್ ಜಪ ಮಾಡುವುದು ಅಪರಾಧವೇ' ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಪ್ರಶ್ನಿಸಿದರು.

Piyush Goyal
Piyush Goyal

By

Published : Mar 22, 2021, 1:10 PM IST

Updated : Mar 22, 2021, 1:27 PM IST

ಪುರುಲಿಯಾ/ ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, 'ಟೋಲ್ ಬಾಜಿ'ಯಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವ ಸಮಯ ಬಂದಿದೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಒಂದು ಸಿಂಡಿಕೇಟ್ ಅಸ್ತಿತ್ವದಲ್ಲಿದೆ. ಪಶ್ಚಿಮ ಬಂಗಾಳದ ಜನರು ಅಭಿವೃದ್ಧಿಯಿಂದ ಮುಕ್ತರಾಗಿದ್ದರು. ಈ ಟೋಲ್ ಬಾಜಿ, ಅಭಿವೃದ್ಧಿಗೆ ಅವಕಾಶ ನೀಡದ ಸಿಂಡಿಕೇಟ್ ಹಣದ ಸರ್ಕಾರ ನಡೆಸುತ್ತಿದೆ. ಈ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವ ಸಮಯ ಬಂದಿದೆ ಎಂದು ಗೋಯಲ್ ಪುರುಲಿಯಾದಲ್ಲಿ ಚುನಾವಣೆ ಸಮಾವೇಶ ಉದ್ದೇಶಿಸಿ ಹೇಳಿದರು.

ಕೇಂದ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇದ್ದರೇ ಎರಡೂ ಸರ್ಕಾರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ ಎಂದರು. ಕೋಲ್ಕತ್ತಾದಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬ್ಯಾನರ್ಜಿ ಮಾತನಾಡಲು ನಿರಾಕರಿಸಿದ ಘಟನೆ ಉಲ್ಲೇಖಿಸಿ, 'ಜೈ ಶ್ರೀ ರಾಮ್ ಜಪ ಮಾಡುವುದು ಅಪರಾಧವೇ' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೊರೊನಾ ರೂಪಾಂತರಕ್ಕೆ ಕರಡಿ ಹಿಡಿತಕ್ಕೆ ಜಾರಿದ ಪೇಟೆ: ಬೆಳ್ಳಂಬೆಳಗೆ ಸೆನ್ಸೆಕ್ಸ್​ ಕುಸಿತ

ಕೆಲವು ದಿನಗಳ ಹಿಂದೆ, ಪ್ರೇಕ್ಷಕರೊಬ್ಬರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ ನಂತರ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ನಿಮ್ಮ ಸಿಎಂ ನಿರಾಕರಿಸಿದ್ದರು. ಜೈ ಶ್ರೀ ರಾಮ್ ಜಪಿಸುವುದು ಅಪರಾಧವೇ? ದುರ್ಗಾ ವಿಗ್ರಹ ವಿಸರ್ಜನೆ ತಡೆದ ಏಕೈಕ ರಾಜ್ಯ ಸರ್ಕಾರ ಪಶ್ಚಿಮ ಬಂಗಾಳ ಎಂದು ಟೀಕಿಸಿದರು.

ಕೋಲ್ಕತ್ತಾದಲ್ಲಿ ನಡೆದ ಮತ್ತೊಂದು ಸಮಾವೇಶದಲ್ಲಿ ಉದ್ದೇಶಿಸಿ ಮಾತನಾಡಿದ ಗೋಯಲ್, ಪಶ್ಚಿಮ ಬಂಗಾಳದ ಕರುಣಾಜನಕ ಮೂಲಸೌಕರ್ಯಗಳ ಬಗ್ಗೆ ಟಿಎಂಸಿ ಆಡಳಿತವನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಹಿಂಸಾಚಾರ ಖಂಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಮೂಲಸೌಕರ್ಯಗಳ ಕರುಣಾಜನಕ ಸ್ಥಿತಿಯನ್ನು ನೋಡುವುದು ವಿಷಾದಕರ ಸಂಗತಿ. ಹಿಂಸಾಚಾರ ಖಂಡನೀಯ. ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರಗಳು ಹಿಂಸಾಚಾರದಲ್ಲಿ ಭಾಗಿಯಾಗಿದ್ದವು ಎಂದರು.

ಪಶ್ಚಿಮ ಬಂಗಾಳದ ಜನರು ವರ್ಷಗಳಿಂದ ದುರುದ್ದೇಶದಿಂದ ಬಳಲುತ್ತಿದ್ದರು. ಕಮ್ಯುನಿಸ್ಟ್ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್​ಗೆ ಸೂಕ್ತ ಉತ್ತರ ನೀಡುವ ಸಮಯ ಬಂದಿದೆ. ಅಭಿವೃದ್ಧಿ ಹೆಚ್ಚಿಸುವ ಡಬಲ್ ಎಂಜಿನ್ ಸರ್ಕಾರ ಇಲ್ಲಿ ಅಗತ್ಯವಿದೆ. ಸಮೀಕ್ಷೆಯ ವರದಿಗಳು ಬಿಜೆಪಿಯತ್ತ ತೋರಿಸುತ್ತಿದ್ದು, 200 ಸ್ಥಾನಗಳೊಂದಿಗೆ ಸರ್ಕಾರ ರಚಿಸುವುದು ಖಚಿತ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

294 ಸದಸ್ಯರಿರುವ ಬಂಗಾಳ ರಾಜ್ಯ ವಿಧಾನಸಭೆಯ ಚುನಾವಣೆ ಮಾರ್ಚ್ 27ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ ಏಪ್ರಿಲ್ 29ರಂದು ಜರುಗಲಿದೆ.

Last Updated : Mar 22, 2021, 1:27 PM IST

ABOUT THE AUTHOR

...view details