ನವದೆಹಲಿ : ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಗೆ ಆದ್ಯತೆ ಆಧಾರದ ಮೇಲೆ ಲಸಿಕೆ ನೀಡುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಲಾಗಿದೆ.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಅವರು ಜನರಿಗೆ ಸುದ್ದಿ ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದು, ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅವರನ್ನು ಮುಂಚೂಣಿ ಕಾರ್ಮಿಕರು ಎಂದು ಪರಿಗಿಣಿಸಿ ಲಸಿಕೆ ನೀಡಬೇಕು ಎಂದು ಪಿಐಎಲ್ನಲ್ಲಿ ತಿಳಿಸಿಲಾಗಿದೆ.
ಪತ್ರಕರ್ತರಿಗೆ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡುವಂತೆ ಕೋರಿ ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಕೆ ವಕೀಲ ವಿಶಾಲ್ ತಿವಾರಿ ಪಿಐಎಲ್ ಸಲ್ಲಿಸಿದ್ದು, "ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಸ್ಥಳದಿಂದ ನೇರವಾಗಿ ಸುದ್ದಿ ಪ್ರಸಾರ ಮಾಡುವುದು ತ್ಯಾಗದ ಸೇವೆಯಾಗಿದೆ ಮತ್ತು ಇನ್ನೂ ಸರ್ಕಾರವು ಈ ಮುಂಚೂಣಿ ಕಾರ್ಮಿಕರ ಜೀವನವನ್ನು ಗೌರವಿಸಿಲ್ಲ" ಎಂದು ವಾದಿಸಿದ್ದಾರೆ.
ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ ಮತ್ತು ಅದು ನೀಡಿದ ಮಾಹಿತಿಯು ಜನರಿಗೆ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ಮತ್ತು ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರವನ್ನು ಟೀಕಿಸಿದ ತಿವಾರಿ, ಪತ್ರಕರ್ತರ ದಣಿವರಿಯದ ಪ್ರಯತ್ನಗಳ ಹೊರತಾಗಿಯೂ ಸರ್ಕಾರಗಳು ಅವರನ್ನು ಗುರುತಿಸುವಲ್ಲಿ ವಿಫಲವಾಗಿವೆ ಮತ್ತು ಕೊರೊನಾದಿಂದಾಗಿ ಅನೇಕ ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅರ್ಜಿದಾರರು ಮೃತ ಪತ್ರಕರ್ತರ ಕುಟುಂಬಗಳಿಗೆ 20 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಕೋರಿದ್ದು, ಅವರಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಆಗ್ರಹಿಸಿದ್ದಾರೆ.