ನವದೆಹಲಿ: ಕಳೆದ 12 ದಿನಗಳಿಂದ ಸತತವಾಗಿ ಏರಿಕೆ ದಾಖಲಿಸಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ.
ಒಟ್ಟಾರೆ 12 ದಿನಗಳಲ್ಲಿ ಸುಮಾರು 3.63 ರೂ. ಪೆಟ್ರೋಲ್ ದರದಲ್ಲಿ ಹೆಚ್ಚಳ ಕಂಡಿದ್ದರೆ, ಡೀಸೆಲ್ ಬೆಲೆಯಲ್ಲಿ ಬರೋಬ್ಬರಿ 3.84 ರೂ. ಏರಿಕೆ ಕಂಡು ಬಂದಿತ್ತು. ಮುಂಬೈನಲ್ಲಿ ಲೀಟರ್ ಪೆಟ್ರೋಲ್ಗೆ 97 ರೂ ಇದ್ದರೆ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇದು 100 ರೂ ದಾಟಿತ್ತು. ಹೀಗಾಗಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.