ಒಂದೂವರೆ ತಿಂಗಳಿಂದ ಪೆಟ್ರೋಲ್-ಡೀಸೆಲ್ ಯಥಾಸ್ಥಿತಿ; ಇಂದಿನ ದರ ಚೆಕ್ ಮಾಡಿ - ಇಂದು ಕರ್ನಾಟಕ ಪೆಟ್ರೋಲ್ ಬೆಲೆ
ಕಳೆದ ಒಂದೂವರೆ ತಿಂಗಳಿನಿಂದ ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರಸ್ತುತ, ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರಗಳು ಲೀಟರ್‌ಗೆ ರೂ 100 ಸಮೀಪದಲ್ಲಿದೆ. ಹೆಚ್ಚಿನ ನಗರಗಳಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ ರೂ 90ಕ್ಕಿಂತ ಹೆಚ್ಚಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಒಂದೂವರೆ ತಿಂಗಳಿನಿಂದ ಪೆಟ್ರೋಲ್-ಡಿಸೇಲ್ ಬೆಲೆ ಯಥಾಸ್ಥಿತಿ
By
Published : Jul 4, 2022, 9:13 AM IST
|
Updated : Jul 4, 2022, 1:01 PM IST
ಬೆಂಗಳೂರು/ನವದೆಹಲಿ: ಇಂಧನ ಬೆಲೆಯಲ್ಲಿ ನಿರಂತರ ಏರಿಕೆಯ ನಂತರ ಕಳೆದ ಕೆಲವು ದಿನಗಳಿಂದ ಬೆಲೆ ಯಥಾಸ್ಥಿತಿಯಲ್ಲಿದೆ. ವಾರದ ಮೊದಲ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಇದ್ದಷ್ಟೇ ಇದೆ. ಹಾಗೆ ನೋಡುವುದಾದರೆ, ಕಳೆದ ಒಂದೂವರೆ ತಿಂಗಳಿನಿಂದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿಂದು ಪೆಟ್ರೋಲ್ ಲೀಟರ್ ಬೆಲೆ 96.72 ರೂ ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂ. ಇದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111.35 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 97.28 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ, ಪೆಟ್ರೋಲ್ ಬೆಲೆ ಲೀಟರ್‌ಗೆ 106.03 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 92.76 ರೂ. ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ 102.63 ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ರೂ 94.25 ರಷ್ಟಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 101.94 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 87.89 ರೂ. ಗೆ ಮಾರಾಟವಾಗುತ್ತಿದೆ.