ಪಟಿಯಾಲಾ(ಪಂಜಾಬ್): ಇಲ್ಲಿನ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಹೊರಗಿನಿಂದ ಬಂದ ಗೂಂಡಾಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಕಂಠಪೂರ್ತಿ ಕುಡಿದು ವಿವಿ ವಿದ್ಯಾರ್ಥಿಗಳ ಮೇಲೆ ಗೂಂಡಾಗಳ ಹಲ್ಲೆ.. ವಿಡಿಯೋ ವೈರಲ್ - ಪಟಿಯಾಲ ವಿಶ್ವವಿದ್ಯಾಲಯ
ಹುಡುಗಿಯರನ್ನ ಚುಡಾಯಿಸಲು ಆಗಮಿಸುತ್ತಿದ್ದ ಕೆಲ ಗೂಂಡಾಗಳನ್ನ ತಡೆದಿದ್ದಕ್ಕಾಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕಂಠಪೂರ್ತಿ ಕುಡಿದ ವಿದ್ಯಾರ್ಥಿಗಳು ಈ ದಾಳಿ ನಡೆಸಿದ್ದು, ಘಟನೆಯಲ್ಲಿ 7 ಯುವಕರು ಹಾಗೂ ಓರ್ವ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ. ಚಿಕಿತ್ಸೆಗಾಗಿ ಪಟಿಯಾಲಾದ ಸರ್ಕಾರಿ ರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ ಹೊರಗಿನಿಂದ ಬಂದ ಗೂಂಡಾಗಳು ಹಾಗೂ ವಿದ್ಯಾರ್ಥಿಗಳ ನಡುವೆ ಈ ಹೊಡೆದಾಟ ನಡೆದಿದೆ.
ಕೆಲ ಗೂಂಡಾಗಳು ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿನಿಯರಿಗೆ ಕೀಟಲೆ ಮಾಡುವ ಉದ್ದೇಶದಿಂದ ನಿತ್ಯ ಆಗಮಿಸುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳು ಅವರನ್ನ ನಿಲ್ಲಿಸಿದಾಗ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ರಾಜು ದೋಶಿ ಎಂಬ ವಿದ್ಯಾರ್ಥಿ ಹೆಸರು ಸಹ ಕೇಳಿ ಬಂದಿದೆ. ಹಲ್ಲೆ ನಡೆಸಿರುವ ಕೆಲವರು ಸ್ಥಳದಲ್ಲೇ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನ ಪೊಲೀಸರು ಬಂಧಿಸಿದ್ದಾರೆ.