ಕರ್ನಾಟಕ

karnataka

ETV Bharat / bharat

ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ: ರಾಹುಲ್ ಗಾಂಧಿ - ರಾಹುಲ್​ ಗಾಂಧಿ ಟ್ವೀಟ್​

ಇಂದಿನಿಂದ ಸಂಸತ್ತಿನಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಮೊದಲ ದಿನವೇ ಮೂರು ಪ್ರಮುಖ ಕೃಷಿ ರದ್ಧತಿ ಕುರಿತು ಮಸೂದೆ ಮಂಡಿಸಲಿದ್ದಾರೆ. ಆದರೆ ಚರ್ಚೆ ಇಲ್ಲದೇ ಮಸೂದೆ ರದ್ಧತಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಪಕ್ಷಗಳು ಹೇಳಿದ್ದು, ಚರ್ಚೆಗೆ ಒತ್ತಾಯಿಸುತ್ತಿವೆ.

parliament-begins-its-winter-session
ರಾಹುಲ್ ಗಾಂಧಿ

By

Published : Nov 29, 2021, 11:26 AM IST

ನವದೆಹಲಿ : ಇಂದಿನ ಅಧಿವೇಶನದಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಕೃಷಿ ಕಾಯ್ದೆ ರದ್ಧತಿ ಕುರಿತು ಚರ್ಚೆಗೆ ಪಟ್ಟು ಹಿಡಿಯುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ಟೀಟ್​ ಮಾಡಿರುವ ರಾಹುಲ್​ ಗಾಂಧಿ, ಇಂದಿನ ಸಂಸತ್ತಿನಲ್ಲಿ ರೈತನೆಂಬ ಸೂರ್ಯ ಉದಯಿಸಲಿದ್ದಾನೆ ಎಂದು ಪೋಸ್ಟ್​ ಮಾಡುವ ಮೂಲಕ ಸಂಸತ್ತಿನಲ್ಲಿ ಮೂರು ಪ್ರಮುಖ ಕೃಷಿ ಮಸೂದೆ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುವ ಮೂನ್ಸೂಚನೆ ನೀಡಿದ್ದಾರೆ.

ಇನ್ನು ಅಧಿವೇಶನ ಕುರಿತು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್ ಸಹ​ ಟ್ಟೀಟ್​ ಮಾಡಿ, ಇಂದು ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೇ 3 ಕೃಷಿ ಕಾನೂನುಗಳ ರದ್ಧತಿ ಮಸೂದೆ ಮಂಡಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. 16 ತಿಂಗಳ ಹಿಂದೆ ಕಾನೂನುಗಳ ಅಂಗೀಕಾರವು ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿತ್ತು. ರದ್ದುಗೊಳಿಸುವ ಮೊದಲು ಚರ್ಚೆಗೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details