ಕರ್ನಾಟಕ

karnataka

ETV Bharat / bharat

ಸೌದೆ ತರಲು ಕಾಡಿಗೆ ಹೋದಾಗ ಸಿಕ್ತು ವಜ್ರ: ಆದಿವಾಸಿ ಮಹಿಳೆಯ ಅದೃಷ್ಟವೇ ಬದಲು! - etv bharat kannada

ಮಹಿಳೆಯೊಬ್ಬಳು ಮಿಲಿಯನೇರ್ ಆಗಿದ್ದಾರೆ. ಆದಿವಾಸಿ ಮಹಿಳೆ ಸೌದೆಗೆಂದು ಕಾಡಿಗೆ ಹೋಗಿದ್ದರು. ದಾರಿಯಲ್ಲಿ ಬೆಲೆಬಾಳುವ 4.39 ಕ್ಯಾರೆಟ್​ ವಜ್ರ ಸಿಕ್ಕಿದೆ.

ಆದಿವಾಸಿ ಮಹಿಳೆಗೆ ಕಾಡಿನಲ್ಲಿ ವಜ್ರ ಸಿಕ್ಕಿದೆ
ಆದಿವಾಸಿ ಮಹಿಳೆಗೆ ಕಾಡಿನಲ್ಲಿ ವಜ್ರ ಸಿಕ್ಕಿದೆ

By

Published : Jul 28, 2022, 3:34 PM IST

Updated : Jul 28, 2022, 3:47 PM IST

ಪನ್ನಾ (ಮಧ್ಯಪ್ರದೇಶ): ಪನ್ನಾ ಜಿಲ್ಲೆಯನ್ನು ಹೀರಾ ನಗರಿ ಎಂದು ಸಹ ಕರೆಯಲಾಗುತ್ತದೆ. ಈ ವಜ್ರದ ಹರಳಿನ ಭೂಮಿ ಯಾರನ್ನಾದರೂ ಒಮ್ಮೆಲೆ ಶ್ರೀಮಂತರನ್ನಾಗಿಸಿಬಿಡುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಆದಿವಾಸಿ ಮಹಿಳೆಯೊಬ್ಬರಿಗೆ ಸಿಕ್ಕಿರುವ ವಜ್ರದ ಹರಳು ಮತ್ತು ಮಾರುಕಟ್ಟೆಯಲ್ಲಿ ಅದಕ್ಕಿರುವ ಮೌಲ್ಯ ಎಂದು ಹೇಳಲಾಗ್ತಿದೆ.

ಹೌದು, ಆದಿವಾಸಿ ಮಹಿಳೆಯೊಬ್ಬಳು ಮಿಲಿಯನೇರ್ ಆಗಿದ್ದಾರೆ. ಈ ಆದಿವಾಸಿ ಮಹಿಳೆ ಸೌದೆಗೆಂದು ಕಾಡಿಗೆ ಹೋಗಿದ್ದರು. ದಾರಿಯಲ್ಲಿ ಬೆಲೆಬಾಳುವ 4. 39 ಕ್ಯಾರೆಟ್​ ವಜ್ರ ಸಿಕ್ಕಿದೆ. ಇವರು ವಜ್ರದ ಕಚೇರಿಯಲ್ಲಿ ಇದನ್ನು ಠೇವಣಿ ಇಟ್ಟಿದ್ದಾರೆ. ಈ ವಜ್ರದ ಅಂದಾಜು ಬೆಲೆ ಸುಮಾರು 20 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ.

ಸೌದೆ ತರಲು ಕಾಡಿಗೆ ಹೋದಾಗ ಸಿಕ್ತು ವಜ್ರ

ಕಾಡಿನಲ್ಲಿ ವಜ್ರ ಪತ್ತೆ:ಪನ್ನಾನಗರದ ವಾರ್ಡ್ ನಂ. 27 ಪುರಷೋತ್ತಮಪುರ ನಿವಾಸಿ ಗೆಂದಾ ಬಾಯಿ ಬುಡಕಟ್ಟು ಮಹಿಳೆ ಸೌದೆಗೆಂದು ಬೆಳಗ್ಗೆ ಕಾಡಿಗೆ ಹೋಗಿದ್ದರು. ದಾರಿಯಲ್ಲಿ ಹೊಳೆಯುವ ಕಲ್ಲು ಕಂಡಿತು. ಅವರು ಅದನ್ನು ಎತ್ತಿಕೊಂಡು ಮನೆಗೆ ಬಂದು ತಮ್ಮ ಗಂಡನಿಗೆ ತೋರಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರೂ ಆ ಹೊಳೆಯುವ ಕಲ್ಲನ್ನು ಗುರುತಿಸಲು ಸಾಧ್ಯವಾಗದೆ, ನೇರವಾಗಿ ವಜ್ರದ ಆಫೀಸ್​ಗೆ ಬಂದಿದ್ದಾರೆ. ಇಲ್ಲಿ ಸಿಬ್ಬಂದಿಗೆ ಇದನ್ನು ತೋರಿಸಿದಾಗ, ಅದು ಹೊಳೆಯುವ ಕಲ್ಲಲ್ಲ, ಬದಲಾಗಿ ಬೆಲೆಬಾಳುವ ವಜ್ರ ಎಂದು ತಿಳಿಸಿದ್ದಾರೆ.

ಹರಾಜಿಗೆ ಇಡಲಾಗುವುದು: ವಜ್ರದ ತೂಕ 4.39 ಕ್ಯಾರೆಟ್​ ಇದ್ದು, ಇದರ ಅಂದಾಜು ಬೆಲೆ ಸುಮಾರು 20 ಲಕ್ಷ ಎಂದು ಹೇಳಲಾಗುತ್ತಿದೆ. ವಜ್ರವನ್ನು ಕಚೇರಿಯಲ್ಲಿ ಠೇವಣಿ ಇಡಲಾಗಿದೆ. ಮುಂಬರುವ ವಜ್ರದ ಹರಾಜಿನಲ್ಲಿ ಇದನ್ನು ಇರಿಸಲಾಗುವುದು. ವಜ್ರವನ್ನು ಪಡೆಯುವ ಮಹಿಳೆಯ ಆರ್ಥಿಕ ಸ್ಥಿತಿ ತುಂಬಾ ದಯನೀಯವಾಗಿದೆ. ಮಹಿಳೆ ಕಟ್ಟಿಗೆ ಮಾರುವ ಮೂಲಕ ತನ್ನ ಮನೆಯ ಖರ್ಚನ್ನು ನಿಭಾಯಿಸುತ್ತಾರೆ. ಮಹಿಳೆಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಅವರಿಗೆ ಮದುವೆ ಮಾಡಿಕೊಡಬೇಕಿದೆ.

ವಜ್ರ ಸಿಕ್ಕಿದ ಮೇಲೆ ಮಹಿಳೆಯ ಸಂತಸಕ್ಕೆ ಮಿತಿಯೇ ಇಲ್ಲದಂತಾಗಿದೆ. ಈಗ ವಜ್ರ ಹರಾಜಿನಿಂದ ಬಂದ ಹಣದಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಸ್ವಂತ ಮನೆ ಕಟ್ಟುತ್ತೇನೆ ಎಂದು ಗೆಂಡಾಬಾಯಿ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀನಗರ - ಲೇಹ್ ಹೆದ್ದಾರಿಯಲ್ಲಿ ಮಣ್ಣು, ಕಲ್ಲುಗಳ ಕುಸಿತ: ಸಂಚಾರ ಸ್ಥಗಿತ

Last Updated : Jul 28, 2022, 3:47 PM IST

ABOUT THE AUTHOR

...view details