ಕರ್ನಾಟಕ

karnataka

ಲಾಂಗ್‌ವಾಲಾ ಕದನದ 50ನೇ ವಿಜಯೋತ್ಸವ.. ಯುದ್ಧದ ನೆನಪುಗಳನ್ನು ಹಂಚಿಕೊಂಡ ಐಎಎಫ್ ಮುಖ್ಯಸ್ಥ

By

Published : Feb 18, 2021, 3:40 PM IST

1971ರ ಲಾಂಗ್‌ವಾಲಾ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧದ ವಿಜಯದ 50ನೇ ವಾರ್ಷಿಕೋತ್ಸವವನ್ನು ಭಾರತ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್​ಕೆಎಸ್​ ಭದೌರಿಯಾ ಯುದ್ಧದ ನೆನಪುಗಳನ್ನು ಹಂಚಿಕೊಂಡರು.

airforce
airforce

ನವದೆಹಲಿ: ಲಾಂಗ್‌ವಾಲಾ ಕದನವನ್ನು ನೆನಪಿಸಿಕೊಂಡ ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್​ಕೆಎಸ್​ ಭದೌರಿಯಾ, ಪಾಕಿಸ್ತಾನ ಸೇನೆಯ ಶಸ್ತ್ರಸಜ್ಜಿತ ಯೋಜನೆಯು ಅದ್ಭುತವಾಗಿತ್ತು ಮತ್ತು 1971ರಲ್ಲಿ ನಡೆದ ಯುದ್ಧದ ಹಾದಿಯನ್ನು ಬದಲಾಯಿಸಬಹುದಿತ್ತು ಎಂದು ಹೇಳಿದರು.

ಪಾಲಂನ ಐಎಎಫ್ ಮ್ಯೂಸಿಯಂನಲ್ಲಿ ಏರ್ ಮಾರ್ಷಲ್ (ನಿವೃತ್ತ) ಭಾರತ್ ಕುಮಾರ್ ಬರೆದಿರುವ 'ದಿ ಎಪಿಕ್ ಬ್ಯಾಟಲ್ ಆಫ್ ಲಾಂಗ್ವಾಲಾ' ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ಆರ್​ಕೆಎಸ್​ ಭದೌರಿಯಾ ಮಾತನಾಡಿದರು.

1971ರ ಯುದ್ಧದಲ್ಲಿ ಪಾಕಿಸ್ತಾನ ವಿರುದ್ಧದ ವಿಜಯದ 50ನೇ ವಾರ್ಷಿಕೋತ್ಸವವನ್ನು ಭಾರತ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಅವರು ಯುದ್ಧದ ನೆನಪುಗಳನ್ನು ಹಂಚಿಕೊಂಡರು.

ಯುದ್ಧದ ಸಮಯದಲ್ಲಿ ಹಾನಿಗೊಳಗಾದ ಪಾಕಿಸ್ತಾನ ಸೇನೆಯ ಎರಡು ಟಿ -59 ಟ್ಯಾಂಕ್‌ಗಳು ಮತ್ತು ಯುದ್ಧದ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಂಟರ್ ಮತ್ತು ಕ್ರಿಶಕ್ ಮತ್ತು ಇತರ ವಿಮಾನಗಳು ಯುದ್ಧದ ಹಾದಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದವು. ಆದರೆ, ಭಾರತೀಯ ವಾಯು ಪಡೆ ಪಾಕಿಸ್ತಾನ ಸೇನೆಗೆ ಸೂಕ್ತ ಪ್ರತ್ಯುತ್ತರ ನೀಡಿತ್ತು ಎಂದು ಅವರು ಹೇಳಿದರು.

ABOUT THE AUTHOR

...view details