ರಜೌರಿ, ಜಮ್ಮು ಮತ್ತು ಕಾಶ್ಮೀರ: ಜಿಲ್ಲೆಯ ಸೇನಾ ಪೋಸ್ಟ್ ಮೇಲೆ ಆತ್ಮಾಹುತಿ ದಾಳಿ ನಡೆಸುವ ಉದ್ದೇಶದಿಂದ ನುಸುಳಿದ್ದ ಶಸ್ತ್ರಸಜ್ಜಿತ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಭಾರತೀಯ ಸೇನೆ ಬಂಧಿಸಿದೆ. ಈ ಹಿಂದೆ 2017 ರಲ್ಲಿ ಭಾರತೀಯ ಸೇನೆಯಿಂದ ಮಾನವೀಯ ಆಧಾರದ ಮೇಲೆ ಆತನನ್ನು ವಾಪಸ್ ಕಳುಹಿಸಲಾಗಿತ್ತು. ಬಂಧಿತ ಪಾಕಿಸ್ತಾನಿ ಸೆರೆಯ ಸಮಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಈಗ ಆ ಉಗ್ರ ಸೇನಾ ಸೌಲಭ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಭಾರತದ ಮೇಲೆ ದಾಳಿ ಮಾಡಲು ಪಾಕ್ ಸೇನೆ ಹಣ ನೀಡಿದೆ ಎಂದ ಭಯೋತ್ಪಾದಕ ಬಂಧಿತ ಉಗ್ರ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಜಿಲ್ಲೆಯ ಸಬ್ಜ್‌ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ ಎಂದು ಗುರುತಿಸಲಾಗಿದೆ. ಉಗ್ರ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತ ಇತರ ನಾಲ್ಕೈದು ಭಯೋತ್ಪಾದರೊಂದಿಗೆ ಬಂದಿದ್ದಾನೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಆತನನ್ನು ನೇಮಿಸಿಕೊಂಡಿರುವುದು ಬಹಿರಂಗಪಡಿಸಿದ್ದಾನೆ ಎಂದು ಸೇನೆ ತಿಳಿಸಿದೆ.
ಪಾಕಿಸ್ತಾನ ಒಳನುಸುಳುವಿಕೆಯನ್ನು ವಿಫಲಗೊಳಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಾಂಡರ್ ಬ್ರಿಗೇಡ್ ಕಪಿಲ್ ರಾಣಾ, ಆಗಸ್ಟ್ 21 ರಂದು ಝಂಗಾರ್‌ನಲ್ಲಿ ನಿಯೋಜಿಸಲಾದ ಸೈನಿಕರು ಎಲ್ಒಸಿಯ ಬಳಿ ಎರಡರಿಂದ ಮೂರು ಭಯೋತ್ಪಾದಕರ ಚಲನೆಯನ್ನು ಗುರುತಿಸಿದ್ದರು. ಒಬ್ಬ ಭಯೋತ್ಪಾದಕ ಭಾರತೀಯ ಪೋಸ್ಟ್‌ನ ಸಮೀಪಕ್ಕೆ ಬಂದು ಬೇಲಿಯನ್ನು ಕತ್ತರಿಸಲು ಪ್ರಯತ್ನಿಸಿದನು. ಓಡಿ ಹೋಗುತ್ತಿದ್ದ ಉಗ್ರನನ್ನು ಸೈನಿಕರು ಬಂಧಿಸಿದರು ಎಂದು ಹೇಳಿದರು.
ಗಾಯಗೊಂಡಿದ್ದ ಪಾಕಿಸ್ತಾನಿ ಭಯೋತ್ಪಾದಕನನ್ನು ಜೀವಂತವಾಗಿ ಸೆರೆಹಿಡಿಯಲಾಯಿತು ಮತ್ತು ತಕ್ಷಣದ ವೈದ್ಯಕೀಯ ನೆರವು ಮತ್ತು ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಂಧಿತ ಭಯೋತ್ಪಾದಕ ತನ್ನ ಗುರುತನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕೋಟಿಯ ಸಬ್‌ಕೋಟ್ ಗ್ರಾಮದ ನಿವಾಸಿ ಹುಸೇನ್ ಎಂದು ಬಹಿರಂಗಪಡಿಸಿದ್ದಾನೆ ಎಂದು ಬ್ರಿಗೇಡಿಯರ್ ರಾಣಾ ಹೇಳಿದ್ದಾರೆ.
ಉಗ್ರನಿಗೆ ತರಬೇತಿ ನೀಡಿತ್ತು ಪಾಕಿಸ್ತಾನ ಸೇನೆ: ಹೆಚ್ಚಿನ ವಿಚಾರಣೆಯಲ್ಲಿ ಭಯೋತ್ಪಾದಕ ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡಲು ತನ್ನ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಕರ್ನಲ್ ಯೂನಸ್ ಚೌಧರಿ ನನಗೆ 30,000 ರೂಪಾಯಿ (ಪಾಕಿಸ್ತಾನದ ಕರೆನ್ಸಿ) ನೀಡಿ ಕಳುಹಿಸಿದ್ದರು ಎಂದು ಹುಸೇನ್ ಬಹಿರಂಗಪಡಿಸಿದ್ದಾನೆ. ದೀರ್ಘಕಾಲದವರೆಗೆ ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ್ದಾಗಿ ಹುಸೇನ್ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಪಾಕಿಸ್ತಾನ ಸೇನೆಯ ಮೇಜರ್ ರಜಾಕ್ ತನಗೆ ತರಬೇತಿ ನೀಡಿದ್ದಾನೆ ಎಂದು ಹೇಳಿದ್ದಾರೆ ಎಂದು ಸೇನಾಧಿಕಾರಿ ಮಾಹಿತಿ ನೀಡಿದರು.
ರಕ್ತ ಹರಿಸಲು ಬಂದ ಉಗ್ರನ ಜೀವ ಉಳಿಸಿದ ಸೇನೆ ಪಾಕ್ ಕುತಂತ್ರ ಬಯಲು ಮಾಡಿದ ಉಗ್ರ: ನಾನು ಭಯೋತ್ಪಾದಕರ ಜೊತೆಗೂಡಿ ಬಂದಿದ್ದೆ. ಅವರು ನನಗೆ ಮೋಸ ಮಾಡಿದರು. ಬಳಿಕ ನನ್ನನ್ನು ಭಾರತೀಯ ಸೇನೆಯು ಸೆರೆಹಿಡಿಯಿತು. ನಾನು ಆರು ತಿಂಗಳ ತರಬೇತಿಯನ್ನು ಪಡೆದಿದ್ದೇನೆ. ಲಷ್ಕರ್-ಎ-ತೈಬಾ (ಎಲ್ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸದಸ್ಯರಿಗಾಗಿ ಹಲವಾರು (ಭಯೋತ್ಪಾದಕ) ಶಿಬಿರಗಳಿಗೆ (ಪಾಕಿಸ್ತಾನ ಸೇನೆಯು ನಡೆಸುತ್ತಿದೆ) ಭೇಟಿ ನೀಡಿದ್ದೇನೆ ಎಂದು ಬಂಧಿತ ಹುಸೇನ್ ಸುದ್ದಿಗಾರರಿಗೆ ತಿಳಿಸಿದರು
ಪಾಕ್ ಉಗ್ರರನ ಜೀವ ಉಳಿಸಿದ ಸೇನೆ: ಹುಸೇನ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜೌರಿಯ ಮಿಲಿಟರಿ ಆಸ್ಪತ್ರೆಯ ಕಮಾಂಡೆಂಟ್ ಬ್ರಿಗೇಡಿಯರ್ ರಾಜೀವ್ ನಾಯರ್ ಹೇಳಿದ್ದಾರೆ. ಅವರು ನಮ್ಮ ಪಡೆಗಳ ರಕ್ತ ಹರಿಸಲು ಬಂದರು. ಆದರೆ ಆ ಉಗ್ರನ ಜೀವವನ್ನು ನಮ್ಮ ಪಡೆ ಉಳಿಸಿದೆ. ಬಂಧನದ ಸಮಯದಲ್ಲಿ ಆತ ‘ಮೈ ಮರ್ನೆ ಕೆ ಲಿಯೇ ಆಯಾ ಥಾ, ಮುಜೆ ಧೋಕಾ ದೇ ದಿಯಾ’ (ನಾನು ಸಾಯಲು ಬಂದಿದ್ದೆ, ಆದ್ರೆ ನನಗೆ ಮೋಸ ಮಾಡಿದರು) ಎಂದು ಕೂಗಿದ್ದು ಕೇಳಿಸಿತು ಎಂದು ನಾಯರ್ ಹೇಳಿದರು.
ಓದಿ:ಬೆಂಗಳೂರಲ್ಲಿ ದೇಶದ್ರೋಹ ಕೇಸ್: ತಮಾಷೆಗಾಗಿ ಸ್ನೇಹಿತರ ಸವಾಲು ಸ್ವೀಕರಿಸಿ ಪಾಕ್ ಬಾವುಟ ಹಾಕಿದ್ವಿ ಎಂದ ಟೆಕ್ಕಿಗಳು