ಕರ್ನಾಟಕ

karnataka

ETV Bharat / bharat

COVID Vaccination: ದೇಶಾದ್ಯಂತ 2.27 ಲಕ್ಷ ಗರ್ಭಿಣಿಯರಿಗೆ ಲಸಿಕೆ, ರಾಜ್ಯಕ್ಕೆ 6ನೇ ಸ್ಥಾನ

ದೇಶಾದ್ಯಂತ 2.27 ಲಕ್ಷ ಗರ್ಭಿಣಿಯರಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಮಂದಿ ಲಸಿಕೆ ಪಡೆದಿದ್ದಾರೆ. ಇಲ್ಲಿ 78,838 ಗರ್ಭಿಣಿಯರು ವ್ಯಾಕ್ಸಿನ್‌ ಪಡೆದು ಮೊದಲ ಸ್ಥಾನದಲ್ಲಿದೆ. ಆಂಧ್ರ ಪ್ರದೇಶ, ಒಡಿಶಾ ಮತ್ತು ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ.

over 2 dot 27 lakh pregnant women given their first dose of covid vaccine health ministry
2.27 ಲಕ್ಷ ಗರ್ಭಿಣಿಯರಿಗೆ ಕೋವಿಡ್‌ ಲಸಿಕೆ; ಕರ್ನಾಟಕಕ್ಕೆ 6ನೇ ಸ್ಥಾನ

By

Published : Jul 31, 2021, 7:02 AM IST

ನವದೆಹಲಿ: ಕೋವಿಡ್‌ ನಿಯಂತ್ರಣದ ಭಾಗವಾಗಿ ದೇಶಾದ್ಯಂತ 2.27 ಲಕ್ಷ ಗರ್ಭಿಣಿಯರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಗರ್ಭಿಣಿಯರಿಗೆ ವ್ಯಾಕ್ಸಿನ್​​ ವಿತರಣೆಯಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ.

ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, ಅತಿ ಹೆಚ್ಚು ಅಂದರೆ 78,838 ಗರ್ಭಿಣಿಯರು ವ್ಯಾಕ್ಸಿನ್‌ ಪಡೆದಿದ್ದಾರೆ. ನಂತರದ ಸ್ಥಾನದಲ್ಲಿ ಆಂಧ್ರ ಪ್ರದೇಶ (34,228), ಒಡಿಶಾ (29,821), ಮಧ್ಯ ಪ್ರದೇಶ (21,842), ಕೇರಳ (18,423) ಮತ್ತು ಕರ್ನಾಟಕ (16,673) ನಂತರದ ಸ್ಥಾನದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.

ಇದು ಗರ್ಭಿಣಿಯರಿಗೆ ಸೋಂಕಿನ ಅಪಾಯಗಳು ಮತ್ತು ಲಸಿಕೆಯ ಪ್ರಯೋಜನಗಳ ಬಗ್ಗೆ ನಿಯಮಿತ ಸಮಾಲೋಚನೆಯನ್ನು ಒದಗಿಸುತ್ತದೆ. ಅಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಅವರಿಗೆ ಲಸಿಕೆ ಹಾಕಬೇಕೇ ಅಥವಾ ಬೇಡವೇ ಎಂಬುದು ತಿಳಿದಿದೆ ಎಂದು ಹೇಳಿದೆ.

ಲಸಿಕೆ 46 ಕೋಟಿ ಮೀರಿದ ಲಸಿಕಾ ಅಭಿಯಾನ

ದೇಶದಲ್ಲಿ ಈವರೆಗೆ 46 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಶುಕ್ರವಾರ ಒಂದೇ ದಿನದ ಸುಮಾರು 44 ಲಕ್ಷದ 39 ಸಾವಿರ ಜನರಿಗೆ ವ್ಯಾಕ್ಸಿನ್‌ ವಿತರಿಸಲಾಗಿದೆ. ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಒಂದು ಕೋಟಿ ಲಸಿಕೆಗಳನ್ನು ನೀಡಿವೆ.

ಭಿಕ್ಷುಕರಿಗೆ ವಿಶೇಷ ಚಾಲನೆ

ಲಸಿಕೆ ಪಡೆಯಲು ಸಾಧ್ಯವಾಗದ ವಸತಿರಹಿತರು ಹಾಗೂ ಭಿಕ್ಷುಕರಿಗೆ ವಿಶೇಷ ಲಸಿಕೆ ಹಾಕಲು ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಕುರಿತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಎನ್‌ಜಿಒಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರ ನೆರವಿನೊಂದಿಗೆ ಈ ಅಭಿಯಾನವನ್ನು ಆಯೋಜಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.

For All Latest Updates

ABOUT THE AUTHOR

...view details