ಜತ್ತಪುರ(ಪಂಜಾಬ್) :ಲಮ್ಮೆ ಜತ್ತಪುರ ಗ್ರಾಮದ ಗುರುದ್ವಾರ ದಮದಾಮ ಸಾಹಿಬ್‌ನಲ್ಲಿ ಕಾಮಗಾರಿಗೆ ಅಡಿಪಾಯ ಹಾಕಲು ಭೂಮಿ ಅಗೆಯುತ್ತಿದ್ದಾಗ ಬ್ರಿಟಿಷರ ಕಾಲದ 100ಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾಗಿವೆ. ಅಲ್ಲಿನ ಸಂಘಟಕರು ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ನಾಣ್ಯಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ.
ಈ ನಾಣ್ಯಗಳು ಮತ್ತು ಸಿಖ್ ಇತಿಹಾಸದ ನಡುವೆ ಯಾವುದೇ ಸಂಬಂಧವಿಲ್ಲ. ಇಲ್ಲಿನ ಆಡಳಿತವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಥವಾ ರಾಜ್ಯ ಪುರಾತತ್ವ ಇಲಾಖೆಯನ್ನು ಆಹ್ವಾನಿಸಿದ್ದು, ನಾಣ್ಯಗಳ ಬಗ್ಗೆ ಅಧ್ಯಯನ ನಡೆಸಲು ಕೋರಿದೆ.