ಕರ್ನಾಟಕ

karnataka

ETV Bharat / bharat

'ಮುಂಗಾರು ಅಧಿವೇಶನದ ಹಳಿ ತಪ್ಪಿಸಿದ್ದು ಸರ್ವಾಧಿಕಾರಿ ಕೇಂದ್ರ ಸರ್ಕಾರ': ಪ್ರತಿಪಕ್ಷಗಳ ಗಂಭೀರ ಆರೋಪ - ರೈತರ ಚಳುವಳಿ

ಪ್ರಮುಖ ರಾಷ್ಟ್ರೀಯ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಗದೇ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯಗೊಂಡಿದ್ದು, ಉಭಯ ಸದನಗಳಲ್ಲಿನ ಕಲಾಪದ ವಿಫಲತೆಗೆ ಕೇಂದ್ರ ಸರ್ಕಾರವೇ ಪೂರ್ತಿ ಹೊಣೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಗದ್ದಲ-ಪ್ರತಿಭಟನೆಗಳೊಂದಿಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನ
ಗದ್ದಲ-ಪ್ರತಿಭಟನೆಗಳೊಂದಿಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನ

By

Published : Aug 12, 2021, 5:34 PM IST

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 'ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು' ಅನುಸರಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಈ ಬಾರಿಯ ಸಂಸತ್ತಿನ ಮುಂಗಾರು ಅಧಿವೇಶನದ ಹಳಿ ತಪ್ಪಿಸಿದೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ.

ಗದ್ದಲ - ಪ್ರತಿಭಟನೆಗಳೊಂದಿಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನ

ಕೇವಲ ಗದ್ದಲ-ಪ್ರತಿಭಟನೆಗಳೊಂದಿಗೇ ಲೋಕಸಭಾ - ರಾಜ್ಯಸಭಾ ಕಲಾಪಗಳು ಮುಕ್ತಾಯಗೊಂಡಿದೆ. 10 ವಿರೋಧ ಪಕ್ಷಗಳ ಪ್ರತಿನಿಧಿಗಳು ಸಹಿ ಮಾಡಿದ ಜಂಟಿ ಹೇಳಿಕೆಯಲ್ಲಿ, ಕೇಂದ್ರ ಸರ್ಕಾರವು ತನ್ನ ವಿವೇಚನಾರಹಿತ ಬಹುಮತವನ್ನು ಬಳಸಿಕೊಂಡು ಸಂಸದೀಯ ಪ್ರಜಾಪ್ರಭುತ್ವದ ನಿಯಮಗಳನ್ನು ಉಲ್ಲಂಘಿಸಿ, ಶಾಸಕಾಂಗ ಕಾರ್ಯಸೂಚಿಯನ್ನು ಗಾಳಿಗೆ ತೂರಿದ್ದು, ಇದನ್ನು ತಾವು ಖಂಡಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಪೆಗಾಸಸ್​​ ವಿವಾದಕ್ಕೆ ಸಂಸತ್​ ಕಲಾಪ ಬಲಿ ; ಸ್ಪೀಕರ್​ ಭೇಟಿ ಮಾಡಿದ ಸರ್ವಪಕ್ಷಗಳ ನಾಯಕರು

ಪ್ರತಿಪಕ್ಷಗಳು ಪ್ರಸ್ತಾಪಿಸಿದ ಪೆಗಾಸಸ್ ಪ್ರಕರಣ, ರೈತರ ಚಳವಳಿ, ತೈಲ ಬೆಲೆ ಏರಿಕೆ, ಹಣದುಬ್ಬರ ಮತ್ತು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ - ಹೀಗೆ ಪ್ರಮುಖ ರಾಷ್ಟ್ರೀಯ ಸಮಸ್ಯೆಗಳು ಮತ್ತು ಸಾರ್ವಜನಿಕ ಕಾಳಜಿಯ ವಿಷಯಗಳು ಕುರಿತು ಸಮಂಜಸವಾಗಿ ಚರ್ಚಿಸಲು ಅವಕಾಶ ಸಿಗಲಿಲ್ಲ.

ನಮ್ಮ ಬೇಡಿಕೆಗಳನ್ನು ಕೇಂದ್ರವು ಮೂಲೆಗೆಸೆದಿದೆ. ಸರ್ಕಾರ ಕೇವಲ ದುರಹಂಕಾರಿ ಹಾಗೂ ನಿರ್ಲಕ್ಷ್ಯ ಮನೋಭಾವದಲ್ಲೇ ಉಳಿಯಿತು. ಸಂಸತ್ತಿನ ಉಭಯ ಸದನಗಳಲ್ಲಿನ ಕಲಾಪದ ವಿಫಲತೆಗೆ ಕೇಂದ್ರ ಸರ್ಕಾರವೇ ಪೂರ್ತಿ ಹೊಣೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ABOUT THE AUTHOR

...view details