ಕರ್ನಾಟಕ

karnataka

ETV Bharat / bharat

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು​ ಚೀತಾ ಸಾವು: 7ಕ್ಕೇರಿದ ಸಾವಿನ ಸಂಖ್ಯೆ!

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ.

ತೇಜಸ್​ ಚೀತಾ ಸಾವು
ತೇಜಸ್​ ಚೀತಾ ಸಾವು

By

Published : Jul 12, 2023, 8:19 AM IST

Updated : Jul 12, 2023, 11:34 AM IST

ಶಿಯೋಪುರ್ ​(ಮಧ್ಯಪ್ರದೇಶ):ಮಂಗಳವಾರದಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಆಫ್ರಿಕನ್ ಚೀತಾ ಸಾವನ್ನಪ್ಪಿದ್ದು, ನಾಲ್ಕು ತಿಂಗಳಲ್ಲಿ ಸಂಭವಿಸಿದ ಏಳನೇ ಸಾವು ಇದಾಗಿದೆ. ಇದರಿಂದಾಗಿ ಅರಣ್ಯ ಇಲಾಖೆ ಹಾಗೂ ಉದ್ಯಾನವನ ನಿರ್ವಹಣೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ತೇಜಸ್ ಎಂಬ ಹೆಸರಿನ ನಾಲ್ಕು ವರ್ಷ ವಯಸ್ಸಿನ ಗಂಡು ಚೀತಾವನ್ನು ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಇತರೆ ಚೀತಾಗಳೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಜೆ.ಎಸ್. ಚೌಹಾಣ್ ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕುನೋ ಪಾರ್ಕ್ ನಿರ್ವಹಣೆಯ ಮೇಲ್ವಿಚಾರಣೆ ಸಮಯದಲ್ಲಿ ತೇಜಸ್​ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಇದನ್ನು ಗಮನಿಸಿದ ಮೇಲ್ವಿಚಾರಣಾ ತಂಡವು ಕೂಡಲೇ ಪಾಲ್ಪುರ್ ಪ್ರಧಾನ ಕಚೇರಿಯಲ್ಲಿರುವ ಪಶುವೈದ್ಯರಿಗೆ ಮಾಹಿತಿ ರವಾನಿಸಿದ್ದರು. ವೈದ್ಯರು ಸ್ಥಳಕ್ಕೆ ತೆರಳಿ ಚೀತಾವನ್ನು ಪರೀಕ್ಷಿಸಿದ್ದು ಗಾಯದ ತೀವ್ರತೆ ಗಂಭೀರವಾಗಿರುವುದು ಗೊತ್ತಾಗಿದೆ. ಬಳಿಕ ಅರಿವಳಿಕೆ ನೀಡಿ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಆದರೆ ಮಧ್ಯಾಹ್ನ ಚೀತಾ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕುನೋ ಉದ್ಯಾನದಲ್ಲಿ ಮತ್ತೆರಡು ಗಂಡು ಚೀತಾಗಳನ್ನು ಕಾಡಿಗೆ ಬಿಟ್ಟ ಒಂದು ದಿನದ ಅಂತರದಲ್ಲೇ ತೇಜಸ್​ ಸಾವು ಸಂಭವಿಸಿದೆ. ಚೀತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.

ಜ್ವಾಲಾ ಎಂಬ ಹೆಸರಿನ ಚೀತಾ ಈ ವರ್ಷದ ಮಾರ್ಚ್​ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಅವುಗಳಲ್ಲಿ ಮೂರು ಮೇ ತಿಂಗಳಲ್ಲಿ ಸಾವನ್ನಪ್ಪಿದ್ದವು. ಸಶಾ ಹೆಸರಿನ ಚೀತಾ ಮಾರ್ಚ್ 27ರಂದು ಕಿಡ್ನಿ ಸಂಬಂಧಿತ ಕಾಯಿಲೆಗೆ ಬಲಿಯಾದರೆ, ಉದಯ್ ಏಪ್ರಿಲ್ 13ರಂದು ಕೊನೆಯುಸಿರೆಳೆದಿತ್ತು. ಮತ್ತೊಂದು ದಕ್ಷ ಹೆಸರಿನ ಚೀತಾ ಮೇ 9ರಂದು ಇತರೆ ಚಿರತೆಗಳ ಕಾದಾಟದಲ್ಲಿ ಗಾಯಗೊಂಡು ಅಸುನೀಗಿತ್ತು. ಇದರಿಂದಾಗಿ ಒಟ್ಟಾರೆ ಚೀತಾಗಳ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ, ಸೋಮವಾರ ಕುನೋ ಉದ್ಯಾನದಲ್ಲಿ ಪ್ರಭಾಷ್ ಮತ್ತು ಪಾವಕ್ ಹೆಸರಿನ ಎರಡು ಚೀತಾಗಳನ್ನು ಕರೆತರಲಾಗಿದೆ. ಇದರಿಂದಾಗಿ ಈವರೆಗೆ ಕರೆತರಲಾದ ಒಟ್ಟು ಚೀತಾಗಳ ಸಂಖ್ಯೆ 12ಕ್ಕೇರಿದೆ ಎಂದು ಶಿಯೋಪುರದ ವಿಭಾಗೀಯ ಅರಣ್ಯಾಧಿಕಾರಿ ಪಿ.ಕೆ. ವರ್ಮಾ ಮಾಹಿತಿ ನೀಡಿದರು.

ಇದನ್ನೂ ಓದಿ:ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಧೀರಾ ಹೆಸರಿನ ಚೀತಾ ಸಾವು : 3 ತಿಂಗಳಲ್ಲಿ ಉಸಿರು ನಿಲ್ಲಿಸಿದ ಮೂರು ನಮೀಬಿಯನ್​ ಚೀತಾಗಳು

Last Updated : Jul 12, 2023, 11:34 AM IST

ABOUT THE AUTHOR

...view details