ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ನಕ್ಕಪಲ್ಲಿಯಲ್ಲಿರುವ ಔಷಧ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಔಷಧ ಘಟಕದಲ್ಲಿ ಸ್ಫೋಟ ಸಂಭವಿಸಿ ಅಗ್ನಿ ಇಡೀ ಘಟಕವನ್ನು ಆವರಿಸಿದೆ. ಪರಿಣಾಮ, ಅಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ. ಓರ್ವ ಸಾವನ್ನಪ್ಪಿದ್ದಾರೆ. ಅಗ್ನಿ ಪಸರಿಸುತ್ತಿದ್ದಂತೆ ಕೂಡಲೇ ಔಷಧ ಘಟಕದಲ್ಲಿ ಕೆಲಸ ನಿಲ್ಲಿಸಲಾಯಿತು. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಆಂಧ್ರ ಪ್ರದೇಶದ ಔಷಧ ಘಟಕದಲ್ಲಿ ಸ್ಫೋಟ ಗಂಗಾಧರ್, ಗೋಪಾಲ್, ರಾಜು ಮತ್ತು ರಾಜೇಶ್ ಎಂಬ ಕಾರ್ಮಿಕರಿಗೆ ಗಾಯಗಳಾಗಿವೆ. ಗಾಯಗೊಂಡ ನಾಲ್ವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಉತ್ತಮ ಚಿಕಿತ್ಸೆಗಾಗಿ ನಗರಕ್ಕೆ ರವಾನಿಸಲಾಗಿದೆ. ಮೃತ ಕಾರ್ಮಿಕನನ್ನು ಸಾಯಿರಾಮ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ರೈತರಿಗಾಗಿ ಸ್ಮಾರ್ಟ್‌ಫೋನ್ ಸಬ್ಸಿಡಿ ಯೋಜನೆ ಘೋಷಿಸಿದ ಗುಜರಾತ್ ಸರ್ಕಾರ
ಇದಕ್ಕೂ ಮೊದಲು ಈ ಘಟಕದಲ್ಲಿ 2016ರಲ್ಲಿ ಸ್ಫೋಟ ಸಂಭವಿಸಿದ್ದು, ಒರ್ವ ಮೃತಪಟ್ಟಿದ್ದರು ಮತ್ತು ಇಬ್ಬರು ಗಾಯಗೊಂಡಿದ್ದರು. ಇದೀಗ ಕಂಪನಿ ಆಡಳಿತ ಮಂಡಳಿಯು ಗಾಯಾಳುಗಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಐಟಿಯು ಮುಖಂಡರು ಒತ್ತಾಯಿಸಿದ್ದಾರೆ.