ಕರ್ನಾಟಕ

karnataka

ನಿಮ್ಮ ಭವಿಷ್ಯ ಬಂದೂಕು, ಕಲ್ಲುಗಳಲ್ಲಿಲ್ಲ, ಲ್ಯಾಪ್‌ಟಾಪ್‌ಗಳಲ್ಲಿದೆ: ಕಾಶ್ಮೀರದ ಯುವಜನತೆಗೆ ಅಮಿತ್ ಶಾ ಕಿವಿಮಾತು

By

Published : Jun 23, 2023, 10:28 PM IST

ಗೃಹ ಸಚಿವ ಅಮಿತ್​ ಶಾ ಅವರು ಕಾಶ್ಮೀರಿ ಯುವಕರಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸುವಂತೆ ಕರೆ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಶಾ
ಗೃಹ ಸಚಿವ ಅಮಿತ್ ಶಾ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಕಣಿವೆಯ ಯುವಜನರ ಭವಿಷ್ಯ ಬಂದೂಕು ಮತ್ತು ಕಲ್ಲುಗಳಲ್ಲಿ ಇಲ್ಲ. ಜ್ಞಾನ ಗಳಿಸುವ ಮತ್ತು ತಮ್ಮ ಕೌಶಲ್ಯಗಳನ್ನು ವೃದ್ಧಿಸಿಗೊಳಿಸುವತ್ತ ಗಮನ ಹರಿಸಬೇಕು ಎಂದು ಶುಕ್ರವಾರ ಕಾಶ್ಮೀರಿ ಯುವಕರಿಗೆ ಗೃಹ ಸಚಿವ ಅಮಿತ್ ಶಾ ಕರೆ ನೀಡಿದ್ದಾರೆ.

ಶ್ರೀನಗರದಲ್ಲಿರುವ ರಾಜಭವನದಲ್ಲಿ ಅನೇಕ ಯೋಜನೆಗಳನ್ನು ಉದ್ಘಾಟಿಸಿದ ಅಮಿತ್ ಶಾ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಶ್ಮೀರಿ ಯುವಕರಿಗೆ ಬಂದೂಕು ಮತ್ತು ಕಲ್ಲುಗಳನ್ನು ನೀಡಿದವರು ಎಂದಿಗೂ ಕಣಿವೆಯ ಯುವಜನರ ಹಿತೈಷಿಗಳಲ್ಲ. ಬಂದೂಕುಗಳು ಮತ್ತು ಕಲ್ಲುಗಳು ಕಾಶ್ಮೀರಿ ಯುವಕರ ಭವಿಷ್ಯದ ಹಾದಿಯಲ್ಲ. ನಿಮ್ಮ ಲ್ಯಾಪ್‌ಟಾಪ್‌ಗಳನ್ನು ಎತ್ತಿಕೊಂಡು ಮುಂದುವರಿಯಿರಿ. ಏಕೆಂದರೆ ವಿಶಾಲವಾದ ಭಾರತೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವಾರು ನಿರೀಕ್ಷೆಗಳಿವೆ. ನಿಮ್ಮ ಸಾಮರ್ಥ್ಯವನ್ನು ನೋಡಲು ನಾವು ಕುತೂಹಲದಿಂದ ಕಾಯುತ್ತಿದ್ದೇವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರವು ಗಮನಾರ್ಹ ಬದಲಾವಣೆ ಕಂಡಿದೆ. ಸ್ಫೋಟಗಳು, ಮುಷ್ಕರಗಳು ಮತ್ತು ಶಾಲೆ ಮುಚ್ಚುವಿಕೆಗಳು ಎಲ್ಲವನ್ನೂ ನಿಯಂತ್ರಣದಲ್ಲಿ ಇರಿಸಲಾಗಿದೆ. ಶಾಂತಿ ಸ್ಥಾಪಿಸಲಾಗಿದೆ. 2022ರಲ್ಲಿ 1.88 ಬಿಲಿಯನ್ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಅವರ ಹಿಂದಿನ ಕಾಶ್ಮೀರ ಭೇಟಿಯಲ್ಲಿ ಕ್ಯಾಬ್‌ಗಳನ್ನು ಪಡೆಯಲು ಸಾಧ್ಯವಾಗದ ಬಗ್ಗೆ ಅನೇಕ ಜನರು ಅವರಿಗೆ ದೂರು ನೀಡಿದ್ದಾರೆ ಎಂದು ಹೇಳಿದರು.

ಪ್ರವಾಸಿಗರ ಬೃಹತ್ ಒಳಹರಿವು ನಿಭಾಯಿಸುವ ಸಲುವಾಗಿ ಮುಂದಿನ ಐದು ವರ್ಷಗಳಲ್ಲಿ ಕಣಿವೆಯಾದ್ಯಂತ ಹೋಟೆಲ್ ಕೊಠಡಿ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.

ಕಳೆದ 70 ವರ್ಷಗಳಲ್ಲಿ ಇಲ್ಲಿನ ರೈತರು ತಮ್ಮ ಖಾತೆಗಳಲ್ಲಿ ಯಾವುದೇ ಹಣವನ್ನು ಪಡೆದಿಲ್ಲ. ಆದರೆ ಈಗ 12.43 ಲಕ್ಷ ರೈತರು ವಾರ್ಷಿಕವಾಗಿ 6,000 ರೂಪಾಯಿ ಪಡೆಯುತ್ತಾರೆ. ಜಮ್ಮು ಕಾಶ್ಮೀರದಲ್ಲಿ ಹಣ ಅರ್ಹ ವ್ಯಕ್ತಿಯನ್ನು ತಲುಪುತ್ತಿರಲಿಲ್ಲ. ಭಾರಿ ಭ್ರಷ್ಟಾಚಾರದಿಂದಾಗಿಯೇ ವ್ಯರ್ಥವಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂದು ಅಮಿತ್ ಶಾ ಹೇಳಿದರು.

ಇದನ್ನೂ ಓದಿ:ಇಂದಿರಾ ಗಾಂಧಿಯಿಂದ ಜೈಲು ಪಾಲಾದ ನಾಯಕರು ರಾಹುಲ್‌ಗೆ ಸ್ವಾಗತ ಕೋರುತ್ತಿದ್ದಾರೆ: ಪ್ರತಿಪಕ್ಷಗಳಿಗೆ ಕುಟುಕಿದ ಬಿಜೆಪಿ

ABOUT THE AUTHOR

...view details