ಕರ್ನಾಟಕ

karnataka

ETV Bharat / bharat

ಯಾವುದೇ ಕೊರತೆ ಇಲ್ಲ ; ಕಲ್ಲಿದ್ದಲು ಬಿಕ್ಕಟ್ಟು ಆಧಾರ ರಹಿತ ಎಂದ ಸಚಿವೆ ನಿರ್ಮಲಾ ಸೀತಾರಾಮನ್‌ - ದೇಶದಲ್ಲಿ ಕಲ್ಲಿದ್ದಲು ಕೊರತೆ

ಯಾವುದಕ್ಕೂ ಕೊರತೆಯಿಲ್ಲ. ವಾಸ್ತವವಾಗಿ, ನಾನು ಸಚಿವರ ಹೇಳಿಕೆಯನ್ನು ನೆನಪಿಸಿಕೊಂಡರೆ, ಪ್ರತಿ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಮುಂದಿನ ನಾಲ್ಕು ದಿನಗಳ ದಾಸ್ತಾನುವನ್ನು ತಮ್ಮ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಲಭ್ಯವಿರುತ್ತದೆ. ಪೂರೈಕೆ ಕೊಂಡಿ ಕಡಿತವಾಗಿಲ್ಲ ಎಂದು ಸೀತಾರಾಮನ್ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಹೇಳಿದರು..

No shortage of anything; reports of coal crisis baseless: FM Sitharaman
ಯಾವುದೇ ಕೊರತೆ ಇಲ್ಲ; ಕಲ್ಲಿದ್ದಲು ಬಿಕ್ಕಟ್ಟು ಆಧಾರ ರಹಿತ ಎಂದ ಸಚಿವೆ ನಿರ್ಮಲಾ ಸೀತಾರಾಮನ್‌

By

Published : Oct 13, 2021, 5:24 PM IST

ಬೋಸ್ಟನ್ :ದೇಶದಲ್ಲಿ ಯಾವುದೇ ಕೊರತೆ ಇಲ್ಲ. ಕಲ್ಲಿದ್ದಲು ಬಿಕ್ಕಟ್ಟು ಎದುರಾಗಿದೆ ಎಂಬುದು ಸಂಪೂರ್ಣ ಆಧಾರರಹಿತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ದೇಶದಲ್ಲಿ ಕಲ್ಲಿದ್ದಲು ಕೊರತೆ ಎದುರಾಗುತ್ತಿರುವ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಭಾರತ ಹೆಚ್ಚುವರಿ ವಿದ್ಯುತ್‌ ಪೂರೈಕೆಯ ದೇಶವಾಗಿದೆ.

ಎರಡು ದಿನಗಳ ಹಿಂದೆಯಷ್ಟೇ ವಿದ್ಯುತ್ ಸಚಿವ ಆರ್ ಕೆ ಸಿಂಗ್ ದಾಖಲೆ ನೀಡಿ, ಕಲ್ಲಿದ್ದಲು ಕೊರತೆ ಸಂಪೂರ್ಣ ಆಧಾರರಹಿತ ಎಂದು ಹೇಳಿದ್ದಾರೆ. ಬಹುಶಃ ಇತರೆ ದಾಸ್ತಾನುಗಳ ಕೊರತೆಯಿಂದಾಗಿ ಕಲ್ಲಿದ್ದಲು ಪೂರೈಕೆ ಬೇಡಿಕೆ ಪರಿಸ್ಥಿತಿಯಲ್ಲಿ ಹಠಾತ್ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದಿದ್ದಾರೆ.

ಯಾವುದಕ್ಕೂ ಕೊರತೆಯಿಲ್ಲ. ವಾಸ್ತವವಾಗಿ, ನಾನು ಸಚಿವರ ಹೇಳಿಕೆಯನ್ನು ನೆನಪಿಸಿಕೊಂಡರೆ, ಪ್ರತಿ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಮುಂದಿನ ನಾಲ್ಕು ದಿನಗಳ ದಾಸ್ತಾನುವನ್ನು ತಮ್ಮ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಲಭ್ಯವಿರುತ್ತದೆ. ಪೂರೈಕೆ ಕೊಂಡಿ ಕಡಿತವಾಗಿಲ್ಲ ಎಂದು ಸೀತಾರಾಮನ್ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಹೇಳಿದರು.

ಮೊಸಾವರ್-ರಹ್ಮಾನಿ ಸೆಂಟರ್ ಫಾರ್ ಬ್ಯುಸಿನೆಸ್ ಹಾಗೂ ಅಲ್ಲಿನ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಭಾಷಣೆ ಮಾಡಿದ ಸಚಿವರಿಗೆ ಹಾರ್ವರ್ಡ್ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಅವರು ಇಂಧನ ಕೊರತೆ ಮತ್ತು ಭಾರತದಲ್ಲಿ ಕಲ್ಲಿದ್ದಲು ದಾಸ್ತಾನು ಕಡಿಮೆಯಾದ ವರದಿಗಳ ಬಗ್ಗೆ ಪ್ರಶ್ನಿಸಿದರು. ಪೂರೈಕೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಭಾರತ ಹೆಚ್ಚುವರಿ ವಿದ್ಯುತ್‌ ಹೊಂದಿರುವ ದೇಶವಾಗಿದೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:ರಾಜ್ಯಗಳು ಕೇಂದ್ರ ಸರ್ಕಾರದ ಸೂಚನೆ ಕಡೆಗಣಿಸಿದ್ದೇ ಕಲ್ಲಿದ್ದಲು ಕೊರತೆಗೆ ಕಾರಣವಾಯಿತೇ?

ABOUT THE AUTHOR

...view details