ಕರ್ನಾಟಕ

karnataka

ETV Bharat / bharat

ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 45ಕ್ಕೂ ಹೆಚ್ಚು ಕಡೆ ಎನ್​ಐಎ ದಾಳಿ - ಸ್ಫೋಟದಲ್ಲಿ ಜಮೀಶಾ ಮುಬಿನ್ ಮೃತ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ಸಂಬಂಧ ಚೆನ್ನೈ ಸೇರಿದಂತೆ ರಾಜ್ಯದ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ) ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ.

NIA official conducting a raid  NIA official conducting a raid in Tamil Nadu  ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ  ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಕಾರೊಂದು ಸ್ಫೋಟ  ಸ್ಫೋಟದಲ್ಲಿ ಜಮೀಶಾ ಮುಬಿನ್ ಮೃತ  ಕಾರು ಸ್ಫೋಟ ಪ್ರಕರಣ
ಕಾರು ಸ್ಫೋಟ ಪ್ರಕರಣ

By

Published : Nov 10, 2022, 7:41 AM IST

Updated : Nov 10, 2022, 9:37 AM IST

ಕೊಯಮತ್ತೂರು (ತಮಿಳುನಾಡು):ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ತಮಿಳುನಾಡಿನ 45 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಕೊಯಮತ್ತೂರಿನ ದೇವಸ್ಥಾನದ ಬಳಿ ಸಂಭವಿಸಿದ ಘಟನೆಯಲ್ಲಿ 29 ವರ್ಷದ ಜಮೀಶಾ ಮುಬಿನ್ ಎಂಬವರು ಸಾವನ್ನಪ್ಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಇದುವರೆಗೆ 6ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಇಂಜಿನಿಯರಿಂಗ್ ಪದವೀಧರನಾಗಿದ್ದ ಮುಬಿನ್​ನನ್ನು ಈ ಹಿಂದೆ 2019 ರಲ್ಲಿ ಎನ್‌ಐಎ ಅಧಿಕಾರಿಗಳು ಭಯೋತ್ಪಾದಕ ಪ್ರಕರಣದಡಿ ವಿಚಾರಣೆ ನಡೆಸಿದ್ದರು. ಈತನನ್ನು ಪ್ರಾಥಮಿಕ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಮೊಹಮ್ಮದ್ ಥಲ್ಕಾ (25), ಮೊಹಮ್ಮದ್ ಅಸರುದ್ದೀನ್ (25), ಮುಹಮ್ಮದ್ ರಿಯಾಜ್ (27), ಫಿರೋಜ್ ಇಸ್ಮಾಯಿಲ್ (27), ಮೊಹಮ್ಮದ್ ನವಾಜ್ ಇಸ್ಮಾಯಿಲ್ (27) ಮತ್ತು ಮೃತನ ಸಂಬಂಧಿ ಅಫ್ಸರ್ ಖಾನ್ ಇದುವರೆಗೆ ಪೊಲೀಸರು ಬಂಧಿಸಿದ ಆರೋಪಿಗಳು.

ಇದನ್ನೂ ಓದಿ:ಕೊಯಮತ್ತೂರು ಸ್ಫೋಟ: ಎನ್​ಐಎ, ತಮಿಳುನಾಡು ಪೊಲೀಸರ ಶೋಧಕಾರ್ಯ ಮುಂದುವರಿಕೆ

Last Updated : Nov 10, 2022, 9:37 AM IST

ABOUT THE AUTHOR

...view details