ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಿಕ್ಕಿಂತ ಒಂದು ಅದ್ಭುತ ವಿಡಿಯೋ ವೈರಲ್ ಆಗ್ತಿರುತ್ತವೆ. ಸದ್ಯ ಅಂತಹದ್ದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗ್ತಿದೆ. ಇದರಲ್ಲಿ ನವಜಾತ ಶಿಶುವೊಂದು ತಾಯಿ ಜೊತೆ ಸಂಸ್ಕೃತ ಶ್ಲೋಕ ಪಠಿಸುತ್ತಿದೆ. ಇದನ್ನ ನೋಡಿರುವ ನೆಟ್ಟಿಗರು ಫಿದಾ ಆಗಿದ್ದು, ಇದು ಕಲಿಯುಗದ ಅಭಿಮನ್ಯು ಎಂದು ಹೇಳ್ತಿದ್ದಾರೆ.
ತಾಯಿ ಜೊತೆ 'ಸಂಸ್ಕೃತ ಶ್ಲೋಕ' ಹೇಳುವ ನವಜಾತ ಶಿಶು.. ನೆಟ್ಟಿಗರು ಫಿದಾ; ಕಲಿಯುಗದ ಅಭಿಮನ್ಯು ಎಂದ ಜನರು! - ವೈರಲ್ ವಿಡಿಯೋ
ನವಜಾತ ಶಿಶುವೊಂದು ತಾಯಿ ಜೊತೆ ಶ್ಲೋಕ ಹೇಳುತ್ತಿರುವ ವಿಡಿಯೋ ತುಣುಕೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
Newly born baby sanskrit sloka
ಈ ಅದ್ಭುತ ವಿಡಿಯೋ ತುಣುಕೊಂದನ್ನು ಐಪಿಎಸ್ ಅಧಿಕಾರಿ ರಾಜೇಶ್ ಹಿಂಗಾಂಕರ್ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಗು ಸ್ಪಷ್ಟವಾಗಿ ಸಂಸ್ಕೃತ ಶ್ಲೋಕ ಉಚ್ಚರಿಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಇದನ್ನ ಕಲಿತಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ವಿಡಿಯೋ ಸಾವಿರಾರು ಜನರಿಂದ ವೀಕ್ಷಣೆಗೊಳಗಾಗಿದ್ದು, ಅನೇಕ ರೀತಿಯ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಕೆಲವರು ಮಗುವನ್ನ ಕಲಿಯುಗದ ಅಭಿಮನ್ಯು ಎಂದು ಕರೆದಿದ್ದಾರೆ.
ಇದನ್ನೂ ಓದಿರಿ:ಇದೊಂದು ವಿಶೇಷ ಜಾತ್ರೆ: ಬೆನ್ನಿಗೆ ಮೊಳೆ ಹೊಡೆದು ರಥ ಎಳೆಯುವ ಭಕ್ತರು!