ಕರ್ನಾಟಕ

karnataka

ETV Bharat / bharat

ಮರ್ಯಾದೆಗಂಜಿ ಹುಟ್ಟಿದ ಕೂಡಲೇ ನವಜಾತ ಶಿಶು ಹತ್ಯೆಗೈದ ವಲಸೆ ಕಾರ್ಮಿಕ ಜೋಡಿ - ಕೇರಳದ ಇಡುಕ್ಕಿ ಜಿಲ್ಲೆ

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವಲಸೆ ಕಾರ್ಮಿಕ ಜೋಡಿ ತಮಗೆ ಹುಟ್ಟಿದ ಶಿಶುವನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.

Newborn strangled to death in Kerala
ಕೇರಳದಲ್ಲಿ ಶಿಶು ಹತ್ಯೆ

By

Published : May 12, 2023, 1:38 PM IST

ಇಡುಕ್ಕಿ (ಕೇರಳ):ವಿವಾಹೇತರ ಸಂಬಂಧದಿಂದ ಜನಿಸಿದ ಶಿಶುವನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪದ ಮೇಲೆ ಓರ್ವ ಮಹಿಳೆ ಮತ್ತು ಪುರುಷನನ್ನು ಕೇರಳದ ಇಡುಕ್ಕಿ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಮರ್ಯಾದೆಗೆ ಅಂಜಿ ಶಿಶು ಹುಟ್ಟಿದ ಕೆಲವೇ ಗಂಟೆಗಳಲ್ಲೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಇಡುಕ್ಕಿ ಸಮೀಪದ ಕುಂಬುಮ್ಮೆಟ್ಟುವಿನ ಶಾಂತಿಪುರಂನ ಎಸ್ಟೇಟ್‌ನಲ್ಲಿ ಮೇ 7ರಂದು ನಸುಕಿನ ಜಾವ ಈ ಕೊಲೆ ನಡೆಸಲಾಗಿದೆ. ಮನೆಯ ಮಾಲೀಕ ನೀಡಿದ ದೂರಿನ ಮೇರೆಗೆ ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕರಾದ 23 ವರ್ಷದ ಸುಧುರಾಮ್​ ಮತ್ತು ಮಗುವಿಗೆ ಜನ್ಮ ನೀಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಎಸ್ಟೇಟ್ ಕಾರ್ಮಿಕರಾಗಿದ್ದು, ಇಬ್ಬರೂ ಕೂಡ ಕೆಲವು ಸಮಯದಿಂದ ಸಂಬಂಧ ಹೊಂದಿದ್ದರು. ಅಲ್ಲದೇ, ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಶಾಲೆಗೆ ಹೋಗುವಾಗ ಪ್ರತಿನಿತ್ಯ ಹಿಂಬಾಲಿಸಿ ಕಿರುಕುಳ: ನೊಂದು ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿನಿ

ಅಂದು ರಾತ್ರಿ 12.30ರ ವೇಳೆಗೆ ಮನೆಯಲ್ಲೇ ಮಹಿಳೆ ಮಗು ಜನ್ಮ ನೀಡಿದ್ದಾಳೆ. ಅದರೆ, ಇದಾಗ ಕೆಲವೇ ಗಂಟೆಗಳಲ್ಲಿ ಶಿಶುವನ್ನು ಕೊಲೆ ಮಾಡಲಾಗಿದೆ. ಈ ವಿಷಯವು ಜೋಡಿ ವಾಸಿಸುತ್ತಿದ್ದ ಮನೆಯ ಮಾಲೀಕರಿಗೆ ಬೆಳಗ್ಗೆ 6.30ರ ಸುಮಾರಿಗೆ ಗೊತ್ತಾಗಿದೆ. ಈ ಸಂದರ್ಭದಲ್ಲಿ ಶಿಶುವಿನ ಶವದ ಮುಂದೆ ಇಬ್ಬರು ಅಳುವುದನ್ನು ಮಾಲೀಕರು ಗಮನಿಸಿದ್ದಾರೆ. ನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿಶುವಿನ ಶವದ ಮರಣೋತ್ತರ ಪರೀಕ್ಷೆ ನಡೆಸಿದಾಗ ಹುಟ್ಟಿದ ಕೂಡಲೇ ಕತ್ತು ಹಿಸುಕಿರುವ ಅಂಶ ಬಯಲಾಗಿದೆ. ಇದರ ಆಧಾರದ ಮೇಲೆ ವಿಚಾರಣೆ ವೇಳೆ ಸುಧುರಾಮ್ ಮತ್ತು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಇಬ್ಬರ ಮೇಲೂ ಕೊಲೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರ ನಿಗಾದಲ್ಲಿ ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಸೆಪ್ಟಿಕ್​ ಟ್ಯಾಂಕ್‌ಗಿಳಿದ ಒಂದೇ ಕುಟುಂಬದ ಐವರ ದುರ್ಮರಣ

ABOUT THE AUTHOR

...view details