ಸಿಹಿ-ಕಹಿ ಕ್ಷಣಗಳ ನೀಡಿ ಸರಿದ 2021: 2022ರ ನೂತನ ವರ್ಷಾಚರಣೆಯ ಶುಭಾಶಯಗಳು - 2022ನೇ ವರ್ಷದ ಶುಭಾಶಯಗಳು
ಕೆಲವು ಸುಂದರ ನೆನಪುಗಳನ್ನು ನೀಡಿದ 2021ನೇ ವರ್ಷವನ್ನು ಬೀಳ್ಕೊಡುತ್ತಾ, 2022ರ ವರ್ಷವನ್ನು ಸ್ವಾಗತಿಸೋಣ. ಹಳೆಯ ತಪ್ಪುಗಳನ್ನು ತಿದ್ದಿಕೊಂಡು, ಹೊಸತನಕ್ಕೆ ಮುನ್ನುಡಿ ಬರೆಯೋಣ..
ಸಿಹಿ-ಕಹಿ ನೆನಪುಗಳೊಂದಿಗೆ ಸರಿದ 2021: ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಸಿಹಿ- ಕಹಿ ಅನುಭವಗಳನ್ನು ನೀಡಿದ 2021ನೇ ವರ್ಷವನ್ನು ಬೀಳ್ಕೊಟ್ಟು, ಹೊಸ ಹುರುಪಿನೊಂದಿಗೆ 2022ನೇ ವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಕಳೆದ ವರ್ಷದ ಸುಂದರ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಕಹಿ ಕ್ಷಣಗಳನ್ನು ಮರೆತು, 2022ರ ಭವಿಷ್ಯದತ್ತ ಹೆಜ್ಜೆ ಇಡೋಣ.. ಕೊರೊನಾ ಕಾಡುತ್ತಿದ್ದು, ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿ, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸಾಂಕ್ರಾಮಿಕವನ್ನು ಹೊಡೆದೋಡಿಸೋಣ ಎಂದು ಆಶಿಸುತ್ತಾ, ಈಟಿವಿ ಭಾರತ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತದೆ.