ಕರ್ನಾಟಕ

karnataka

ETV Bharat / bharat

ರಾಷ್ಟ್ರೀಯ ಗಣಿತ ದಿನ: ಗಣಿತ ಕ್ಷೇತ್ರಕ್ಕೆ ರಾಮಾನುಜನ್​ ಕೊಡುಗೆ ಸ್ಮರಣೀಯ! - ಭಾರತೀಯ ಗಣಿತಜ್ಞ ಶ್ರೀನಿವಾಸ್​ ರಾಮನುಜನ್​

National Mathematics Day 2023; ಆರೋಗ್ಯ ಸವಾಲು ಮತ್ತು ಸಾಂಪ್ರದಾಯಿಕ ತರಬೇತಿಯ ಕೊರತೆ ನಡುವೆಯೂ ಈ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪು ಕಡಿಮೆಯೇನಲ್ಲ.

national-mathematics-day-2023-remembering-srinivasa-ramanujan-who-reshaped-20th-century-mathematics
national-mathematics-day-2023-remembering-srinivasa-ramanujan-who-reshaped-20th-century-mathematics

By ETV Bharat Karnataka Team

Published : Dec 22, 2023, 11:07 AM IST

ಹೈದರಾಬಾದ್​: ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್​ 22ರಂದು ಆಚರಿಸಲಾಗುತ್ತದೆ. ಈ ಕ್ಷೇತ್ರಕ್ಕೆ ಗಣನೀಯ ಸೇವೆ ನೀಡಿದ ಭಾರತೀಯ ಗಣಿತಜ್ಞ ಶ್ರೀನಿವಾಸ್​ ರಾಮಾನುಜನ್​ ಅವರ ಜನ್ಮ ದಿನದ ಹಿನ್ನೆಲೆ ಈ ದಿನವನ್ನು ಆಚರಿಸಲಾಗುತ್ತದೆ. ಸಂಖ್ಯಾ ಸಿದ್ಧಾಂತ, ಇನ್ಫಿನಿಟಿ ಸಿರೀಸ್​​​, ಗಣಿತದ ವಿಶ್ಲೇಷಣೆಗೆ ಅವರ ಕೊಡುಗೆಗಳು ಪ್ರಮುಖವಾಗಿವೆ.

ಯಾರು ಈ ಶ್ರೀನಿವಾಸ ರಾಮಾನುಜನ್: ತಮಿಳುನಾಡಿನ ಈರೋಡ್​​ನಲ್ಲಿ 1887ರಲ್ಲಿ ಜನಿಸಿದ ರಾಮಾನುಜನ್ ಅವರು ಬಾಲ್ಯವಸ್ಥೆಯಲ್ಲಿಯೇ ಗಣಿತದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಆರೋಗ್ಯ ಸವಾಲು ಮತ್ತು ಸಾಂಪ್ರದಾಯಿಕ ತರಬೇತಿಯ ಕೊರತೆ ನಡುವೆಯೂ ಈ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪು ಕಡಿಮೆಯಲ್ಲ.

ರಾಮಾನುಜನ್ ಅವರ ಕೊಡುಗೆ: ಗಣಿತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ದೊಡ್ಡದಾಗಿದ್ದು, ಪ್ರಭಾಶಾಲಿಯಾಗಿದೆ. ಇನ್ಫಿನಿಟಿ ಸಿರೀಸ್​, ಗಣಿತದ ವಿಶ್ಲೇಷಣೆ, ಸಂಖ್ಯಾ ಸಿದ್ದಾಂತ, ಕಂಟಿನ್ಯೂಯಿಂಗ್​ ಪ್ರಾಕ್ಷನ್​, ಗೇಮ್​ ಥಿಯರಿ ಮತ್ತು ಮಾಡ್ಯುಲರ್​ ಫಾರ್ಮ್​ಗಳಲ್ಲಿ ಕ್ಷೇತ್ರದಲ್ಲಿ ಅವರ ಕೆಲಸ ಅಗಾಧವಾಗಿದೆ.

ರಾಮಾನುಜನ್ ಅವರ ಸಾಧನೆ: 1914ರಲ್ಲಿ π(ಪೈ) ರೂಪಿಸಿದ್ದು ರಾಮಾನುಜನ್ ಅವರ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ. ಈ ಸೂತ್ರವನ್ನು ಇಂದಿಗೂ ಬಳಸಲಾಗುವ ಅನೇಕ ಅಲ್ಗಾರಿದಮ್‌ಗಳಿಗೆ ಅಡಿಪಾಯವನ್ನು ಹಾಕಿದೆ. π ನ ನಿಖರವಾದ ಅಂದಾಜನ್ನು ಕಂಡುಹಿಡಿಯುವುದು. ಗಣಿತಶಾಸ್ತ್ರದ ಅತ್ಯಂತ ನಿರ್ಣಾಯಕ ಕಾರ್ಯಗಳಲ್ಲಿ ಒಂದಾಗಿದೆ.

ಥೀಟಾ ಕಾರ್ಯಾಚರಣೆ:ರಾಮಾನುಜನ್ ಅವರ ಮಾಕ್ ಥೀಟಾ ಫಂಕ್ಷನ್, ಮಾಡ್ಯುಲರ್ ರೂಪಗಳಲ್ಲಿನ ಪರಿಕಲ್ಪನೆಯು ಅವರ ಗಣಿತದ ಒಳನೋಟವನ್ನು ಹೊಂದಿದೆ. ರಾಮಾನುಜಮ್​ ಸಂಖ್ಯೆ ವಿಶೇಷವಾಗಿ 1729 (ರಾಮಾನುಜನ್ ಅಂಕಿ ಎಂದೇ ಖ್ಯಾತಿ)​ ಅವರ ಸಾಮರ್ಥ್ಯವನ್ನು ಬಹಿರಂಗಪಡಿಸಿದರು. ಇದು ಗಣಿತದ ಸಂಬಂಧಗಳಲ್ಲಿ ಅನನ್ಯ ಗುಣ ಲಕ್ಷಣ ತೋರಿದೆ.

ಸರ್ಕಲ್​ ಮಾದರಿ: ರಾಮಾನುಜನ್​ ಜಿಎಚ್​ ಹಾರ್ಡಿ ಜೊತೆ ಗೂಡಿ ಸರ್ಕಲ್​ ಮೆಥಡ್​ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು 20ನೇ ಶತಮಾನದಲ್ಲಿನ ಸಂಕೀರ್ಣ ತೊಂದರೆಗಳ ಪರಿಹಾರ ಕೊಡುಗೆಯನ್ನು ತಂತ್ರವನ್ನು ತಿಳಿಸಿದೆ. 1911 ರಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ ಜರ್ನಲ್‌ನಲ್ಲಿ ಪ್ರಕಟವಾದ ಅವರ ಲೇಖನಗಳು ಸುಮಾರು 3900 ಫಲಿತಾಂಶಗಳ ಪ್ರಭಾವಶಾಲಿ ಸಂಕಲನವನ್ನು ಪ್ರದರ್ಶಿಸಿದವು. ಸಮೀಕರಣಗಳು ಮತ್ತು ಗುರುತುಗಳಿಗಾಗಿ ಅವರ ಪ್ರತಿಭೆಯನ್ನು ಪ್ರದರ್ಶಿಸಿದವು.

ರಾಮಾನುಜನ್ ಅಜರಾಮರ: 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರೂ ರಾಮಾನುಜನ್​​ ತಮ್ಮ ಗಣಿತದ ಸೂತ್ರಗಳ ಮೂಲಕ ​ಇಂದಿಗೂ ಜೀವಿಸಿದ್ದಾರೆ. ಮಾಜಿ ಪ್ರಧಾನಿ ಡಾ ಮನಮೋಹನ್​ ಸಿಂಗ್​​ 2012ರಲ್ಲಿ ಡಿಸೆಂಬರ್​ 22ರಂದು ರಾಷ್ಟ್ರೀಯ ಗಣಿತ ದಿನವಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಅವರ ಕೊಡುಗೆ ಗೌರವಿಸಿ 2017ರಲ್ಲಿ ಆಂಧ್ರಪ್ರದೇಶದ ಕುಪ್ಪಂನಲ್ಲಿ ರಾಮಾನುಜನ್​ ಮಾಥ್​ ಪಾರ್ಕ್​ ಅನ್ನು ಉದ್ಘಾಟಿಸಲಾಗಿದೆ.

ರಾಮಾನುಜನ್​ ಅವರ ಜೀವನ ಆಧಾರಿತ 'ದಿ ಮ್ಯಾನ್​ ವೂ ನ್ಯೂ ಇನ್ಫಿನಿಟಿ' ಸಿನಿಮಾವನ್ನು 2016ರಲ್ಲಿ ಬಿಡುಗಡೆ ಮಾಡಲಾಯಿತು. ಈ ಸಿನಿಮಾದ ಮೂಲಕ ಅವರ ಜೀವನ ಪ್ರಯಾಣ ಮತ್ತು ಅವರ ಗಣಿತ ಪ್ರಪಂಚದ ಕುರಿತು ತಿಳಿಸಲಾಗಿದೆ.

ಇದನ್ನೂ ಓದಿ:ಏನಿದು ಡಿಸ್ಲೆಕ್ಸಿಯಾ? ಮಕ್ಕಳ ಸಮಸ್ಯೆ ನಿವಾರಣೆಗೆ ಸಾಧನ ಕಂಡುಹಿಡಿದ ಸರ್ಕಾರಿ ಶಾಲಾ ಶಿಕ್ಷಕಿ

ABOUT THE AUTHOR

...view details