ನವದೆಹಲಿ:68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ. 'ಡೊಳ್ಳು' ಸಿನಿಮಾ ಅತ್ಯುತ್ತಮ ಕನ್ನಡ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಡೊಳ್ಳು ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರದ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಚಲನಚಿತ್ರ ನಿರ್ಮಾಪಕ ವಿಪುಲ್ ಷಾ ನೇತೃತ್ವದ 10 ತೀರ್ಪುಗಾರರ ಸದಸ್ಯರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಸಂಬಂಧಿಸಿದ ವರದಿಯನ್ನು ಐ & ಬಿ ಸಚಿವ ಅನುರಾಗ್ ಠಾಕೂರ್ ಅವರಿಗೆ ಸಲ್ಲಿಸಿದ್ದಾರೆ. ಫೀಚರ್ ಫಿಲ್ಮ್‌ಗಳು, ನಾನ್ - ಫೀಚರ್ ಸಿನಿಮಾಗಳು, ಅತ್ಯುತ್ತಮ ಬರವಣಿಗೆ ಮತ್ತು ಅತ್ಯಂತ ಚಲನಚಿತ್ರ - ಸ್ನೇಹಿ ರಾಜ್ಯ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಗಳ ವಿವರ ಇಂತಿದೆ - ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ: ಮಧ್ಯಪ್ರದೇಶ
ಅತ್ಯುತ್ತಮ ವಿಮರ್ಶಕ: ಈ ವರ್ಷ ಯಾವುದೇ ವಿಜೇತರನ್ನು ಘೋಷಿಸಲಾಗಿಲ್ಲ
ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ದಿ ಲಾಂಗೆಸ್ಟ್ ಕಿಸ್
ಫೀಚರ್ ಫಿಲ್ಮ್ ವರ್ಗ - ಅತ್ಯುತ್ತಮ ಚಲನಚಿತ್ರ: ಸೂರರೈ ಪೊಟ್ರು
ಅತ್ಯುತ್ತಮ ನಿರ್ದೇಶನ: ಅಯ್ಯಪ್ಪನುಂ ಕೊಶಿಯುಂ ಚಿತ್ರಕ್ಕಾಗಿ ಸಚಿ ಅವರಿಗೆ ಗೌರವ
ಅತ್ಯುತ್ತಮ ನಟ: ತಾನ್ಹಾಜಿಗಾಗಿ ಅಜಯ್ ದೇವಗನ್ ಮತ್ತು ಸೂರರೈ ಪೊಟ್ರುಗಾಗಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿದೆ.
ಅತ್ಯುತ್ತಮ ನಟಿ-ಅತ್ಯುತ್ತಮ ಪೋಷಕ ನಟಿ:ಅಪರ್ಣಾ ಬಾಲಮುರಳಿ
ಅತ್ಯುತ್ತಮ ಪೋಷಕ ನಟ: ಬಿಜು ಮೆನನ್
ಅತ್ಯುತ್ತಮ ವೇಷಭೂಷಣ: ತನ್ಹಾಜಿ: ದಿ ಅನ್‌ಸಂಗ್ ವಾರಿಯರ್
ಉತ್ತಮ ಮನರಂಜನೆ ಒದಗಿಸುವ ಅತ್ಯುತ್ತಮ ಚಲನಚಿತ್ರ: ತನ್ಹಾಜಿ: ದಿ ಅನ್‌ಸಂಗ್ ವಾರಿಯರ್
ವಿಶೇಷ ಉಲ್ಲೇಖ: ಜೂನ್ (ಮರಾಠಿ)
ಅತ್ಯುತ್ತಮ ಹರ್ಯಾನ್ವಿ ಚಿತ್ರ:ದಾದಾ ಲಕ್ಷ್ಮಿ
ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ
ಅತ್ಯುತ್ತಮ ಮಲಯಾಳಂ ಚಿತ್ರ: ಒಂದು ದಿನದ ನಿಶ್ಚಿತಾರ್ಥ
ಅತ್ಯುತ್ತಮ ಹಿಂದಿ ಚಿತ್ರ: ಟೂಲ್‌ಸಿದಾಸ್ ಜೂನಿಯರ್
ಅತ್ಯುತ್ತಮ ಸಾಹಸ: ಅಯ್ಯಪ್ಪನುಂ ಕೊಶಿಯುಂ