ನಾಸಿಕ್:ಹಿಜಾಬ್ ಮತ್ತು ಬುರ್ಖಾ ಬೆಂಬಲಿಸಿ ಇಂದು ಮಾಲೆಗಾಂವ್ನಲ್ಲಿ ಹಿಜಾಬ್ ದಿನ ಆಚರಿಸಲಾಯಿತು. ಇಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮಾಲೆಗಾಂವ್ನಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು.
ಹಿಜಾಬ್ಗೆ ಬೆಂಬಲ ಸೂಚಿಸಿ ನೂರಾರು ಮುಸ್ಲಿಂ ಮಹಿಳೆಯರು ಗುರುವಾರ ಮಾಲೆಗಾಂವ್ನ ಅಜೀಜ್ ಕಲ್ಲು ಕ್ರೀಡಾಂಗಣದಲ್ಲಿ ರ್ಯಾಲಿ ನಡೆಸಿದರು. ಈ ವೇಳೆ ಒಂದು ಗಂಟೆ ಸಭೆಯನ್ನುದ್ದೇಶಿಸಿ ಶಾಸಕ ಮುಫ್ತಿ ಮಾತನಾಡಿದರು.
ಭಾರತವು ಮಹಿಳೆಯರನ್ನು ಗೌರವಿಸುತ್ತದೆ. ಈ ಸಂಸ್ಕೃತಿಯನ್ನು ನಾಶ ಮಾಡುವ ಷಡ್ಯಂತ್ರವನ್ನು ಕೆಲವು ಮತಾಂಧ ಶಕ್ತಿಗಳು ಆರಂಭಿಸುತ್ತಿವೆ ಎಂದರು. ಹಿಜಾಬ್ ದಿನಕ್ಕೆ ಮಾಲೆಗಾಂವ್ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಭೆಯಲ್ಲಿ ಮಹಿಳೆಯರು ಹಿಜಾಬ್ ಮತ್ತು ಬುರ್ಖಾ ಧರಿಸುವ ಮೂಲಕ ತಮ್ಮ ಧರ್ಮದ ಬೋಧನೆಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಸಿದ್ಧರಾಗಿರಬೇಕು ಎಂದು ಒತ್ತಾಯಿಸಲಾಯಿತು.
ಓದಿ:ಮುಂಬೈಗೂ ಕಾಲಿಟ್ಟ ಹಿಜಾಬ್ ವಿವಾದ : ಕಾಲೇಜ್ಗಳಲ್ಲಿ ದುಪಟ್ಟಾ, ಮುಸುಕು, ಬುರ್ಖಾ ನಿಷೇಧ