ನಾಗ್ಪುರ (ಮಹಾರಾಷ್ಟ್ರ):ಮಧ್ಯಪ್ರದೇಶದ ಜಬಲ್ಪುರಕ್ಕೆ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ನಾಗ್ಪುರ ಸ್ಥಳೀಯ ಬಿಜೆಪಿ ನಾಯಕಿ ಸನಾ ಖಾನ್ ಆಗಸ್ಟ್ 1ರಿಂದ ಕಾಣೆಯಾಗಿದ್ದಾರೆ. ತನ್ನ ವ್ಯಾಪಾರ ಪಾಲುದಾರರಿಂದ ಹತ್ಯೆಗೀಡಾಗಿರಬಹುದು ಅಥವಾ ಅಪಘಾತಕ್ಕೀಡಾಗಿರಬಹುದು ಎಂಬ ಊಹಾಪೋಹ ಹರಿದಾಡುತ್ತಿದೆ.
ಸನಾ ಖಾನ್ ಅವರನ್ನು ಪತ್ತೆ ಹಚ್ಚುವ ಕಾರ್ಯಕ್ಕಾಗಿ ನಾಗ್ಪುರದಿಂದ ಮಾನಕಪುರ ಪೊಲೀಸರ ತಂಡ ಜಬಲ್ಪುರಕ್ಕೆ ತೆರಳಿದೆ. ಜಬಲ್ಪುರದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಆದರೆ ಆಕೆಯನ್ನು ಇನ್ನೂ ಗುರುತಿಸಲಾಗಿಲ್ಲ. ಎಲ್ಲ ಊಹಾಪೋಹಗಳು ನಿರಾಧಾರ ಎಂದು ವಲಯದ ಎರಡು ಉಪ ಪೊಲೀಸ್ ಆಯುಕ್ತ ರಾಹುಲ್ ಮದನೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಆಗಸ್ಟ್ 1ರಿಂದ ನಾಪತ್ತೆಯಾಗಿರುವ ಖಾನ್‌ಗೆ ಜಬಲ್‌ಪುರದಲ್ಲಿ ಯಾರೋ ಒಬ್ಬರು ಜೀವ ಬೆದರಿಕೆ ಹಾಕಿದ್ದಾರೆ. ಜಬಲ್ಪುರಕ್ಕೆ ಹೋದ ಎರಡು ದಿನಗಳ ನಂತರ ಖಾನ್ ಅವರ ತಾಯಿ ತನ್ನ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಸಾಧ್ಯವಾಗಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂದಿನಿಂದ ಪೊಲೀಸರು ಸನಾ ಖಾನ್ಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ನಾಗ್ಪುರದಲ್ಲಿರುವ ಸನಾ ಖಾನ್ ಕುಟುಂಬ ಮತ್ತು ಸಂಬಂಧಿಕರು ಆಕೆಯನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಪಟ್ಟರೂ ಯಾವುದೇ ಮಾಹಿತಿ ಸಿಗದಿದ್ದರಿಂದ ಆತಂಕಕ್ಕೊಳಗಾಗಿದ್ದಾರೆ. ಖಾನ್ ಅವರೊಂದಿಗೆ ಜಬಲ್ಪುರದಲ್ಲಿ ಭೇಟಿಯಾಗಲು ಹೋದ ವ್ಯಕ್ತಿ ಅಪರಾಧಿಯಾಗಿದ್ದು, ಆತನೂ ಸಹ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.
ಕುಟುಂಬದವರ ದೂರಿನ ಮೇರೆಗೆ ಸನಾ ಖಾನ್ ನಾಪತ್ತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ತಂಡ ಶೋಧನಾ ಕಾರ್ಯಕ್ಕೆ ಜಬಲ್ಪುರಕ್ಕೆ ಹೋಗಿದೆ. ಆದರೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗದ್ದರಿಂದ ಅವರು ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಪೊಲೀಸರ ತನಿಖೆ ಚುರುಕುಗೊಂಡಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನಿಂದ ಮಹಿಳೆಯನ್ನು ತಳ್ಳಿದ ಆರೋಪಿ ಸೆರೆ:ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಮಹಿಳಾ ಪ್ರಯಾಣಿಕರ ಬ್ಯಾಗ್ ಅನ್ನು ಬಲವಂತವಾಗಿ ಕಸಿದು ಆಕೆಯನ್ನು ರೈಲಿನಿಂದ ಹೊರತಳ್ಳಿದ ಆರೋಪಡಿ ವ್ಯಕ್ತಿಯೊಬ್ಬನನ್ನು ದಾದರ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮನೋಜ್ ಚೌಧರಿ (32) ಬಂಧಿತ ಆರೋಪಿ. ಆ.6 ರಂದು ಸಂಜೆ 4 ಗಂಟೆ ಸುಮಾರಿಗೆ ಮಹಿಳಾ ಪ್ರಯಾಣಿಕರೊಬ್ಬರು ಪುಣೆ ರೈಲು ನಿಲ್ದಾಣದಿಂದ ಮುಂಬೈ ಸಿಎಸ್‌ಎಂಟಿ (ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ರೈಲು ನಿಲ್ದಾಣಕ್ಕೆ ಉದ್ಯಾನ್ ಎಕ್ಸ್‌ಪ್ರೆಸ್ ಗಾರ್ಡ್ ಸೈಡ್ ಮಹಿಳಾ ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂ. 6ಕ್ಕೆ ರಾತ್ರಿ 8:30ಕ್ಕೆ ಆಗಮಿಸಿತು. ಆಗ ಈ ಘಟನೆ ನಡೆದಿದೆ.
ಇದನ್ನೂ ಓದಿ:ಪ್ರೇಯಸಿಗಾಗಿ ಟೆರೇಸ್ ಮೇಲೆ ಹೋಗಿ ಪಿಜ್ಜಾ ಕೊಟ್ಟ ಪ್ರೇಮಿ.. ಆಕೆಯ ತಂದೆಯನ್ನು ಕಂಡು 4ನೇ ಮಹಡಿಯಿಂದ ಜಿಗಿದವನು ಸಾವು