ಉತ್ತರಖಂಡ: ಇತ್ತೀಚಿನ ದಿನಗಳಲ್ಲಿ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯ ಕುಟುಂಬವೊಂದು ಭಯ, ಆತಂಕದ ಕರಿಛಾಯೆಯಲ್ಲಿ ವಾಸಿಸುತ್ತಿದೆ. ನಗರದ ತಲ್ಲಾ ಗೋರಖ್‌ಪುರ ನಿವಾಸಿ ಉಮೇಶ್ ಪಾಂಡೆ ಎಂಬುವರ ಮನೆಯಲ್ಲಿ ನಿಗೂಢ ಸ್ವರೂಪದ ಬೆಂಕಿ ಕಾಣಿಸಿಕೊಳ್ಳುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ ಮತ್ತೆ ಮತ್ತೆ ಬೆಂಕಿ ಹೊತ್ತಿಕೊಳ್ಳುವುದೇಕೇ ಎಂಬುದು ತಿಳಿಯದಾಗಿದೆ.
ಚಂದ್ರಗ್ರಹಣದ ನಂತರ ಬೆಂಕಿ: 'ನ.8ರಂದು ಚಂದ್ರಗ್ರಹಣ ಮತ್ತು ಭೂಕಂಪ ಸಂಭವಿಸಿದ ಬಳಿಕ ಮನೆಯಲ್ಲಿದ್ದ ವಿದ್ಯುತ್ ಬೋರ್ಡ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ವಿದ್ಯುತ್ ಇಲಾಖೆಗೆ ಕರೆ ಮಾಡಿ ಮನೆಯ ಸಂಪರ್ಕ ಕಡಿತಗೊಳಿಸಿದೆವು. ಆದರೆ, ಸಂಪರ್ಕ ಕಡಿತಗೊಂಡ ಬಳಿಕವೂ ಮನೆಯ ವಿವಿಧೆಡೆ ಅಳವಡಿಸಿದ್ದ ಪ್ಲಾಸ್ಟಿಕ್ ಎಲೆಕ್ಟ್ರಿಕ್ ಬೋರ್ಡ್ಗಳು, ತಂತಿಗಳು ಮತ್ತೆ ಏಕಾಏಕಿ ಉರಿಯಲಾರಂಭಿಸಿವೆ. ಕಳೆದ 8 ದಿನಗಳಿಂದ ಮನೆಯಲ್ಲಿ ಅನಾಹುತ ನಡೆಯುತ್ತಿದೆ' ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಚಂದ್ರಗ್ರಹಣದ ನಂತರ ಮನೆಯಲ್ಲಿ ಕಾಣಿಸಿಕೊಳ್ಳುತ್ತಿರುವ ನಿಗೂಢ ಬೆಂಕಿ ಇದನ್ನೂ ಓದಿ:ಕಟ್ಟಿಗೆ ಅಡ್ಡೆಯಲ್ಲಿ ಆಕಸ್ಮಿಕ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ
8 ದಿನದಲ್ಲಿ 20 ಬಾರಿ ಅವಘಡ: ಮುಚ್ಚಿದ ಕಬ್ಬಿಣದ ಅಲ್ಮೇರಾ, ಬಟ್ಟೆ, ಬೆಡ್ ಮೇಲೆ ಇಟ್ಟಿದ್ದ ಹಾಸಿಗೆ ಕೂಡ ಬೆಂಕಿಗಾಹುತಿಯಾಗಿದೆ. ಕಳೆದ 8 ದಿನಗಳಲ್ಲಿ ಸುಮಾರು 15 ರಿಂದ 20 ಬಾರಿ ಬೆಂಕಿ ಅವಘಡ ಸಂಭವಿಸಿವೆ. ಮನೆಯ ಹೊರಗೆ ವಿದ್ಯುತ್ ಸಂಪರ್ಕ ತಪ್ಪಿಸಿ ಇಟ್ಟಿದ್ದ ಕೂಲರ್ನಲ್ಲಿ ಕೂಡ ಬೆಂಕಿ ಕಾಣಿಸಿಕೊಂಡಿದ್ದು, ಸುಟ್ಟು ಹೋಗಿದೆ. ಇಡೀ ಕುಟುಂಬ ಆತಂಕದಲ್ಲಿದ್ದು, ರಾತ್ರಿ ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಖಾಲಿ ಮಾಡಿ ಹೊರಗಿಡಲಾಗಿದೆ ಎಂದು ಕುಂಟುಂಬಸ್ಥರು ಅಳಲು ತೋಡಿಕೊಂಡರು.
ಇದನ್ನೂ ಓದಿ:ಶಿರಾಳಕೊಪ್ಪದ ಫರ್ನಿಚರ್ ಶಾಪ್ನಲ್ಲಿ ಆಕಸ್ಮಿಕ ಬೆಂಕಿ: 7 ಲಕ್ಷ ಮೌಲ್ಯದ ವಸ್ತು ಬೆಂಕಿಗಾಹುತಿ
ವಿದ್ಯುತ್ ಇಲಾಖೆ, ಪೊಲೀಸರು ತಬ್ಬಿಬ್ಬು: ಕುಟುಂಬಸ್ಥರೆಲ್ಲಾ ರಾತ್ರಿಯಿಡೀ ನಿದ್ದೆಬಿಟ್ಟು ಜಾಗರಣೆ ಮಾಡುತ್ತಿದ್ದರೂ ಸಹ ಇದ್ದಕ್ಕಿದ್ದಂತೆ ಹೊಗೆ ಮತ್ತು ಸುಡುವ ವಾಸನೆ ಬಂದು ನಿಗೂಢವಾಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ವಿಷಯ ತಿಳಿದು ವಿದ್ಯುತ್ ಇಲಾಖೆಯಿಂದ ಮನೆಗೆ ಅರ್ಥಿಂಗ್ ಕೂಡ ಮಾಡಲಾಗಿತ್ತು. ಆದರೆ, ಅರ್ಥಿಂಗ್ ಮಾಡಿದ ನಂತರವೂ ಬೆಂಕಿ ಕಂಡುಬಂದಿದೆ. ಘಟನೆಗೆ ಕಾರಣ ಪತ್ತೆ ಹಚ್ಚುವಲ್ಲಿ ವಿದ್ಯುತ್ ಇಲಾಖೆಯು ವಿಫಲವಾಗಿದ್ದು, ಈ ಬಗ್ಗೆ ಕುಟುಂಬಸ್ಥರು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಜಿಲ್ಲಾಡಳಿತ ಹಾಗೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಲಡಾಖ್ನ ಖದೀಮ್ ಹನೀಫ್ ಮಸೀದಿ ಬೆಂಕಿಗಾಹುತಿ: ವಿಡಿಯೋ