ಮುಂಬೈ:ತಾಯಿ ಮತ್ತು ಮಗು ನಡುವಿನ ಬಾಂಧವ್ಯ ಮನುಷ್ಯರಲ್ಲಿ ಹೇಗಿರುತ್ತದೆಯೋ, ಹಾಗೆ ಪ್ರಾಣಿಗಳಲ್ಲೂ ಇರುತ್ತದೆ ಎಂಬುದಕ್ಕೆ ಮುಂಬೈನಲ್ಲೊಂದು ನಡೆದಿರುವ ಘಟನೆಯೇ ಸಾಕ್ಷಿಯಾಗಿದೆ. ಕಾಡಿನಲ್ಲಿ ಬೇರೆ - ಬೇರೆಯಾಗಿದ್ದ ಚಿರತೆ ಹಾಗೂ ಅದರ ಮರಿ, ಅರಣ್ಯ ಇಲಾಖೆ ಅಧಿಕಾರಿಗಳ ನೆರವಿನಿಂದ ಇದೀಗ ಒಂದಾಗಿವೆ.
ಚಿರತೆ ಮರಿಯನ್ನು ತಾಯಿಯೊಂದಿಗೆ ಸೇರಿಸಿದ ಅರಣ್ಯ ಸಿಬ್ಬಂದಿ ಕಳೆದ ವರ್ಷ ಸಿ 33-ಡೆಲ್ಟಾ ಎಂಬ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದರು. ಇದಾದ ನಂತರ ಮನುಷ್ಯರ ಮೇಲೆ ಚಿರತೆ ದಾಳಿ ಮಾಡುವುದು ಹೆಚ್ಚಾಗ ತೊಡಗಿತು. ಇದರಿಂದ ಎಚ್ಚೆತ್ತ ಸಿಬ್ಬಂದಿ ಅದಕ್ಕೆ ರೆಡಿಯೋ ಕಾಲರ್ ಅನ್ನು ಕಟ್ಟಿ ಮತ್ತೆ ಕಾಡಿಗೆ ಬಿಟ್ಟರು. ನಂತರ ಸಿ 32 ಎಂಬ ಮತ್ತೊಂದು ಹೆಣ್ಣು ಚಿರತೆ ಅರಣ್ಯಾಧಿಕಾರಿಗಳ ಬಲೆಗೆ ಬಿದ್ದಿತು. ಬಳಿಕ ಮನುಷ್ಯರ ಮೇಲಿನ ಚಿರತೆ ದಾಳಿ ಕಡಿಮೆಯಾಯಿತು. ಇದರಿಂದ ಅಧಿಕಾರಿಗಳು ಕೊಂಚ ಅಚ್ಚರಿಗೊಂಡರು.
ಚಿರತೆ ಮರಿ ಪತ್ತೆ: ಸುಮಾರು ಒಂದು ವರ್ಷದ ನಂತರ ಅಂದರೆ ಅಕ್ಟೋಬರ್ 10 ರಂದು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಬಳಿ ನಾಯಿಗಳು ನಿರಂತರವಾಗಿ ಬೊಗಳುತ್ತಿರುವುದು ಭದ್ರತಾ ಸಿಬ್ಬಂದಿ ಗಮನ ಸೆಳೆಯಿತು. ಸ್ವಲ್ಪ ಸಮಯ ಹುಡುಕಾಟ ನಡೆಸಿದ ನಂತರ ಅವರಿಗೆ ರಾಷ್ಟ್ರೀಯ ಉದ್ಯಾನದ ಗಡಿ ಗೋಡೆಯ ಬಳಿ ಒಂದು ಮೂಲೆಯಲ್ಲಿ ಅಡಗಿರುವ ಚಿರತೆ ಮರಿ ಕಾಣಿಸಿತು.
ತಾಯಿಯೊಂದಿಗೆ ಸೇರಿಸಲು ನಿರ್ಧರಿಸಿದ ಸಿಬ್ಬಂದಿ:ಅವರು ಮರಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಅಲ್ಲಿಂದ ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಎಸ್‌ಎನ್‌ಜಿಪಿ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು. ಅಕ್ಟೋಬರ್ 11ರಂದು ಮರಿಯನ್ನು ಮತ್ತೆ ತಾಯಿಯೊಂದಿಗೆ ಸೇರಿಸಲು ಯತ್ನಿಸಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ತಾಯಿಯಿಂದ ಬೇರ್ಪಟ್ಟ ಕರಿ ಚಿರತೆ ಮರಿ : ಕರುಳಬಳ್ಳಿಗಾಗಿ ಹುಡುಕಾಡಿದ ತಾಯಿ
ಪಂಚರದೊಳಗೆ ಮರಿ ಇಟ್ಟ ಸಿಬ್ಬಂದಿ:ಮರಿಯನ್ನು ಪಂಜರದೊಳಗೆ ಹಾಕಿ, ಅದರ ಬಾಗಿಲನ್ನು ದೂರದಿಂದಲೇ ತೆಗೆಯುವಂತೆ ಹಗ್ಗವನ್ನು ಕಟ್ಟಿಡಲಾಗಿತ್ತು. ಆದರೆ, ಆ ರಾತ್ರಿ ಏನೂ ನಡೆಯಲಿಲ್ಲ. ಮರಿಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ನಿರ್ಧರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಮರುದಿನ ಅದೇ ವ್ಯವಸ್ಥೆಯನ್ನು ಮಾಡಿದರು. ಅಲ್ಲದೇ ಪಂಜರದ ಬಳಿ ಕ್ಯಾಮೆರಾವನ್ನು ಹಾಕಿದರು.
ಒಂದಾದ ತಾಯಿ ಚಿರತೆ ಮತ್ತು ಮರಿ: ನಂತರ ಮುಂಜಾನೆ 4.45ರ ಸುಮಾರಿಗೆ ಚಿರತೆಯೊಂದು ಬೋನಿನ ಬಳಿ ಬರುತ್ತಿರುವುದನ್ನು ಕಂಡರು. ಆ ಚಿರತೆ ಬೇರೆ ಯಾವುದೂ ಅಲ್ಲ ಸಿ 33-Delta. ಮರಿಯ ಪ್ರತಿಕ್ರಿಯೆ ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅದು ತಾಯಿಯೇ ಎಂಬುದು ಮನವರಿಕೆಯಾಯಿತು. ಅವರು ನಿಧಾನವಾಗಿ ಪಂಜರದ ಬಾಗಿಲನ್ನು ತೆರೆದರು ಮತ್ತು ಮರಿ ತನ್ನ ತಾಯಿಯ ಕಡೆಗೆ ಓಡಿಹೋಗಿ ಪ್ರೀತಿಯಿಂದ ತಬ್ಬಿಕೊಂಡಿತು. ಶೀಘ್ರದಲ್ಲೇ ತಾಯಿ ಮತ್ತು ಮಗು ಕಾಡಿನಲ್ಲಿ ಕಣ್ಮರೆಯಾದವು.