ಸೋಮನಾಥ (ಗುಜರಾತ್):ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮತ್ತು ಪುತ್ರ, ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಅವರು ಶನಿವಾರ ಇಲ್ಲಿನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದರು. ಗಣ್ಯರನ್ನು ಟ್ರಸ್ಟ್ ಅಧ್ಯಕ್ಷ ಪಿ.ಕೆ.ಲಾಹಿರಿ ಹಾಗೂ ಕಾರ್ಯದರ್ಶಿ ಯೋಗೇಂದ್ರಭಾಯಿ ದೇಸಾಯಿ ಸ್ವಾಗತಿಸಿದರು. ಬಳಿಕ ತಂದೆ ಮತ್ತು ಮಗ ದೇವರಿಗೆ ಅಭಿಷೇಕ, ಪ್ರಾರ್ಥನೆ ಸಲ್ಲಿಸಿದರು. ಅರ್ಚಕರು ಗೌರವಾರ್ಥವಾಗಿ ಗಂಧದ ಪ್ರಸಾದ ನೀಡಿದರು. ಮುಖೇಶ್ ಅಂಬಾನಿ 1.5 ಕೋಟಿ ರೂಪಾಯಿ ದೇಣಿಗೆಯನ್ನು ದೇಗುಲಕ್ಕೆ ಸಮರ್ಪಿಸಿದ್ದಾರೆ.
ಮಧುರೈನಲ್ಲಿ ರಾಷ್ಟ್ರಪತಿ:ಮಹಾಶಿವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಭಕ್ತಿ, ಉಪವಾಸ ಕೈಗೊಂಡು ಸಂಭ್ರಮದಿಂದ ಆಚರಿಸಲಾಗಿದೆ. ಶಿವ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮಿಳುನಾಡಿಗೆ ಆಗಮಿಸಿದ್ದರು. ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ನಡೆದ ಉತ್ಸವದಲ್ಲಿ ಅವರು ಭಾಗವಹಿಸಿದರು. ಪ್ರಸಿದ್ಧ ಮಧುರೈ ಮೀನಾಕ್ಷಿ ದೇವಸ್ಥಾನಕ್ಕೂ ಅವರು ಭೇಟಿ ಕೊಟ್ಟರು.
ತ್ರಿನೇಶ್ವರನಿಗೆ ರಾಜ ಪರಿವಾರದ ಪೂಜೆ: ಮೈಸೂರಿನಲ್ಲಿ ಮಹಾಶಿವರಾತ್ರಿ ಅದ್ಧೂರಿಯಾಗಿ ನಡೆದಿದೆ. ವಿಶೇಷವಾಗಿ ನಂಜುಂಡೇಶ್ವರ ಮತ್ತು ತ್ರಿನೇಶ್ವರನ ದರ್ಶನವನ್ನು ಭಕ್ತರು ಪಡೆದರು. ತ್ರಿನೇಶ್ವರ ದೇವರಿಗೆ ಮೈಸೂರಿನ ಒಡೆಯರಾದ ಯದವೀರ್, ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದರು.