ಸಹರಾನ್‌ಪುರ (ಉತ್ತರಪ್ರದೇಶ) :ಶನಿವಾರದಂದು ಸನ್ಯಾಸಿಯೋರ್ವರ ಅರ್ಧ ಸುಟ್ಟ ಮೃತ ದೇಹ ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಬಾದಶಾಹಿ ಬಾಗ್ ಪ್ರದೇಶದ ಶಿವಾಲಿಕ್ ಪರ್ವತದಲ್ಲಿ ಪತ್ತೆಯಾಗಿತ್ತು. ಬಳಿಕ ಪ್ರವೇಶ್ ಗಿರಿ ಎನ್ನುವ ಸನ್ಯಾಸಿಯಿಂದ ಈ ಹತ್ಯೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಇಬ್ಬರು ಸನ್ಯಾಸಿಗಳು ಸ್ನೇಹಿತರಾಗಿದ್ದರು. ಇಬ್ಬರ ನಡುವಿನ ಜಗಳ ತಾರಕಕ್ಕೇರಿ ನಂತರ ಸಾಧು ಪ್ರವೇಶ್ ಗಿರಿ ತನ್ನ ಸ್ನೇಹಿತ (ಸಾಧು)ನನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.
ಕೋಪದ ಭರದಲ್ಲಿ ತನ್ನ ಸ್ನೇಹಿತನ ಕತ್ತು ಕೊಯ್ದು ಮೃತದೇಹವನ್ನು ಗುಡಿಸಲಿನಲ್ಲಿಟ್ಟು ಗುಡಿಸಲಿಗೇನೆ ಬೆಂಕಿ ಇಟ್ಟು ಮೃತ ದೇಹವನ್ನು ಸುಟ್ಟು ಹಾಕಿದ್ದಾನೆ. ನಂತರ ಆರೋಪಿ ಪ್ರವೇಶ್ ಗಿರಿ ಬೆಂಕಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾನೆ.