ವೈಶಾಲಿ (ಬಿಹಾರ): ತಲೆಗೊಂದು ಮುಂಡಾಸು ಮನೆಗೊಂದು ಸಂಡಾಸ್ ಎಂಬ ಘೋಷವಾಕ್ಯಗಳು ಕೇಳಿ ಬಹಳ ವರ್ಷಗಳೇ ಕಳೆದಿವೆ. ಆದರೆ, ಇನ್ನೂ ಕೆಲ ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿಲ್ಲ. ಇದು ಆಡಳಿತ ಸರ್ಕಾರಗಳ ವೈಫಲ್ಯವೋ ಅಥವಾ ಜನರ ನಿಲಕ್ಷ್ಯವೋ ಗೊತ್ತಿಲ್ಲ. ಹಲವಾರು ಯೋಜನೆಗಳು ಬಂದರೂ ಸರ್ಕಾರದಿಂದ ಅಗತ್ಯ ಸೌಲಭ್ಯಗಳು ಸಿಕ್ಕರೂ ಇನ್ನೂ ಈ ಪದ್ಧತಿ ಮುಕ್ತವಾಗಿರದಿರುವುದು ದೇಶಕ್ಕೆ ಅಂಟಿರುವ ಕಳಂಕದಲ್ಲಿ ಇದೂ ಒಂದು.
ಈ ಮೇಲಿನ ಪೀಠಿಕೆಗೆ ಕಾರಣ ಇದೆ. ಈ ಹಿಂದೆ ಬಯಲು ಬಹಿರ್ದೆಸೆಗೆ ತೆರಳುವಾಗ ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿದ್ದ ಬಗ್ಗೆ ವರದಿ ಬರುತ್ತಿದ್ದವು. ಅಲ್ಲದೇ ಮಹಿಳೆಯರಿಗೆ ಇದೊಂದು ಸಮಸ್ಯೆಯೇ ಆಗಿತ್ತು. ಈಗ ಮತ್ತೆ ಅಂತಹದ್ದೇ ಒಂದು ನೀಚ ಪ್ರಕರಣ ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಶೌಚಾಲಯಕ್ಕೆಂದು ಮನೆಯಿಂದ ಹೊರ ಬಂದ ಅಪ್ರಾಪ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿರುವ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಬಾಲಕಿ ಹೊರ ಬರುವುದನ್ನೇ ಕಾದುಕುಳಿತ ಐವರು ಈ ದುಷ್ಕೃತ್ಯ ಎಸಗಿದ್ದಾರೆ. ಅಲ್ಲದೇ ಬಾಲಕಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೀಟನಾಶಕವನ್ನು ಕುಡಿಸಿ ಪರಾರಿಯಾಗಿದ್ದಾರೆ. ಸದ್ಯ ಕೃತ್ಯ ಎಸಗಿದ ನಾಲ್ವರನ್ನು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೀಟನಾಶಕವನ್ನು ಸೇವಿಸಿರುವ ಬಾಲಕಿ ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪೊಲೀಸರು ಆಕೆಯ ಹೇಳಿಕೆಗಾಗಿ ಕಾಯುತ್ತಿದ್ದಾರೆ.
ಬಾಲಕಿ ಶೌಚಕ್ಕೆ ಹೋಗಲು ತಡರಾತ್ರಿ ಎದ್ದಿದ್ದಾಳೆ ಎನ್ನಲಾಗಿದ್ದು, ಈ ನಡುವೆ ಆಕೆಯ ಬಾಗಿಲ ಬಳಿಯೇ ಐವರು ಆರೋಪಿಗಳು ಹೊಂಚು ಹಾಕಿದ್ದರು. ಅವಕಾಶ ಸಿಕ್ಕ ತಕ್ಷಣ ಆರೋಪಿಗಳು ಬಾಲಕಿಯ ಬಾಯಿ ಬಿಗಿದು ಪಕ್ಕದ ಮಾವಿನ ತೋಟಕ್ಕೆ ಕರೆದೊಯ್ದಿದ್ದಾರೆ. ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಕ್ರಿಮಿನಾಶಕ ಕುಡಿಸಿದ್ದರು. ಆದರೆ, ಬಾಲಕಿ ಹೇಗೋ ತನ್ನ ಮನೆಗೆ ತಲುಪಿ ಅಜ್ಜಿಗೆ ವಿಷಯ ತಿಳಿಸಿದ ಬಳಿಕ ಆಕೆ ಪ್ರಜ್ಞೆ ತಪ್ಪಿದ್ದಾಳೆ.
ಬಾಲಕಿ ಅಜ್ಜಿಯ ಜೊತೆ ಹಳ್ಳಿಯಲ್ಲಿ ವಾಸವಾಗಿದ್ದಳು. ಅವರ ತಂದೆ ತಾಯಿ ಪಾಟ್ನಾದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ತಂದೆ ಗ್ರಾಮಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪತೇಪುರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿ ಎಸ್‌ಐ ಪಲ್ಲವಿ ಕುಮಾರಿ ಅವರು ಆಂಬ್ಯುಲೆನ್ಸ್‌ನಲ್ಲಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ವೈದ್ಯರ ಸಲಹೆಯಂತೆ ಹಾಜಿಪುರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೀಟನಾಶಕ ನೀಡಿದ್ದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸದ್ಯ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ವೇಳೆ, ಎಸ್‌ಐ ಪಲ್ಲವಿ ಕುಮಾರಿ ಮಾತನಾಡಿ, ಬಾಲಕಿಗೆ ಇನ್ನೂ ಪ್ರಜ್ಞೆ ಬಂದಿಲ್ಲ, ಪ್ರಜ್ಞೆ ಬಂದಾಗ ಆಕೆಗೆ ಏನಾಗಿದೆ ಎಂದು ಹೇಳುತ್ತಾಳೆ. ಆತನಿಗೆ ಏನಾದರು ಕುಡಿಯಲು ಕೊಡಲಾಗಿದೆ ಎಂದು ಆತನ ಪಾಲಕರು ಹೇಳಿದ್ದಾರೆ. ಬಾಳಿಗಾಂವ್ ಪೊಲೀಸ್ ಠಾಣೆಯಿಂದ ಪತೇಪುರಕ್ಕೆ ಚಿಕಿತ್ಸೆಗಾಗಿ ಕರೆತರಲಾಗಿದ್ದು, ಪತೇಪುರ ಠಾಣೆಯಿಂದ ಹಾಜಿಪುರ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಮಗುವಿಗೆ ಈಗ ಪ್ರಜ್ಞೆ ಇಲ್ಲ, ಅವಳಿಗೆ ಪ್ರಜ್ಞೆ ಬಂದ ನಂತರ ಅವಳು ತನಗೆ ಏನಾಯಿತು ಎಂದು ಹೇಳುತ್ತಾಳೆ ಎಂಬುದನ್ನು ದಾಖಲಿಸಿಕೊಳ್ಳುತ್ತೇವೆ. ಅವಳಿಗೆ ಕುಡಿಯಲು ಏನನ್ನೋ ನೀಡಲಾಗಿದೆ, ಅವಳಿಗೆ ಏನಾಯಿತು ಎಂದು ಅವಳು ನಂತರ ಹೇಳುತ್ತಾಳೆ ಎಂದು ಬಾಲಿ ಗ್ರಾಮ ಪೊಲೀಸ್ ಠಾಣೆ ಎಸ್‌ಐ ಪಲ್ಲವಿ ಕುಮಾರಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ತ್ವರಿತ ಕ್ರಮ ಕೈಗೊಂಡಿರುವ ಪೊಲೀಸರು 4 ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ನಾಲ್ವರು ಆರೋಪಿಗಳು ಅದೇ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಎಫ್‌ಎಸ್‌ಎಲ್ ತಂಡವನ್ನು ಪೊಲೀಸರು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಎಫ್‌ಎಸ್‌ಎಲ್ ತಂಡವು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದೆ. ಇದರ ಆಧಾರದ ಮೇಲೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ ಎಂದು ಎಸ್‌ಐ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮೇಲ್ಜಾತಿ ಯುವತಿಯ ಪ್ರೀತಿಸಿದ್ದ ವಿದ್ಯಾರ್ಥಿ ಕೊಲೆ ಕೇಸ್: 8 ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್