ಬಾಲಿ (ಇಂಡೋನೇಷ್ಯಾ):ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಕದನ ವಿರಾಮ ಅಗತ್ಯ. ಈ ನಿಟ್ಟಿನಲ್ಲಿ ರಾಜತಾಂತ್ರಿಕ ಮಾರ್ಗಗಳನ್ನು ಬಳಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು. ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ಇಂಧನ ಪೂರೈಕೆಯ ಮೇಲಿನ ನಿರ್ಬಂಧಗಳನ್ನೂ ವಿರೋಧಿಸಿದರು. ಮುಂದಿನ ವರ್ಷ ಬುದ್ಧ ಮತ್ತು ಗಾಂಧಿ ಬದುಕಿದ ಪವಿತ್ರ ನೆಲ ಭಾರತದಲ್ಲಿ ಜಿ20 ಶೃಂಭಸಭೆ ನಡೆದಾಗ ನಾವು ಜಗತ್ತಿಗೆ ಶಾಂತಿಯ ಸಂದೇಶವನ್ನು ನೀಡವೆವು ಎಂದು ಅವರು ಹೇಳಿದರು.
ಆಹಾರ ಮತ್ತು ಶಕ್ತಿ ಸುರಕ್ಷತೆ ಬಗ್ಗೆ ಮಾತನಾಡಿದ ಮೋದಿ, ಮೂಲಭೂತ ಸರಕುಗಳಿಗೆ ಪ್ರಪಂಚದಾದ್ಯಂತ ಬಿಕ್ಕಟ್ಟು ಎದುರಾಗಿದೆ. ಪ್ರತಿ ದೇಶದಲ್ಲಿ ಬಡ ಜನತೆ ಇದರಿಂದ ಸಾಕಷ್ಟು ಪರಿಣಾಮ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇಂಧನ ಪೂರೈಕೆಗೆ ಯಾವುದೇ ನಿರ್ಬಂಧ ವಿಧಿಸಬಾರದು. ಭಾರತವು ರಷ್ಯಾದ ಕಚ್ಚಾ ತೈಲವನ್ನು ರಿಯಾಯಿತಿ ದರದಲ್ಲಿ ಪಡೆಯುತ್ತಿದೆ. 2030ರ ವೇಳೆಗೆ ಭಾರತ ಅರ್ಧದಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳ ಮೂಲಕ ಸಂಪಾದಿಸಲಿದೆ ಎಂದು ತಿಳಿಸಿದರು.