ಪಾಟ್ನಾ (ಬಿಹಾರ): ಬಿಹಾರ ಫಲಿತಾಂಶ ಹೊರಬಿದ್ದು, ಮತ್ತೆ ಸಿಎಂ ಗದ್ದಿಗೆ ಏರಿರುವ ಎನ್ಡಿಎ ಬೆಂಬಲಿತ ನಿತೀಶ್ ಕುಮಾರ್ ಸರ್ಕಾರದ ಮೊದಲ ಅಧಿವೇಶನ ಇಂದು ಆರಂಭಗೊಂಡಿದೆ.
ಜೆಡಿಯುನ ಸಂಜಯ್ ಕುಮಾರ್ ಝಾ ಮತ್ತು ದೇವೇಶ್ ಚಂದ್ರ ಠಾಕೂರ್ ಅವರು ಅಧಿವೇಶನದ ಮೊದಲ ದಿನದಂದು ವಿಧಾನಸಭೆಗೆ ವಿಂಟೇಜ್ ಕಾರಿನಲ್ಲಿ ಆಗಮಿಸಿದ್ದಾರೆ. ಬಿಹಾರವನ್ನು ಮಾಲಿನ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ನಿರ್ಧರಿಸಿದ್ದಾರೆ. ನಾವು ಈ ನಿರ್ಣಯಕ್ಕೆ ಬೆಂಬಲವಾಗಿ ಈ ರೀತಿ ವಿಂಟೇಜ್ ಕಾರಿನಲ್ಲಿ ಬಂದಿದ್ದೇವೆ ಎಂದು ಸಿ.ದೇವೇಶ್ ಠಾಕೂರ್ ತಿಳಿಸಿದ್ದಾರೆ.
ವಿಂಟೇಜ್ ಕಾರ್ನಲ್ಲಿ ಆಗಮಿಸಿದ ಜೆಡಿಯು ನಾಯಕರು ಇವರಲ್ಲದೆ ವಿಧಾನ ಸಭೆಯ ಮುಂಭಾಗ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಕಾಣಿಸಿಕೊಂಡಿದ್ದಾರೆ. 5 ದಿನಗಳ ವರೆಗೆ ನಡೆಯಲಿರುವ ಅಧಿವೇಶನಕ್ಕೆ ವಿರೋಧ ಪಕ್ಷ ನಾಯಕರು ಹಾಜರಾಗಿದ್ದಾರೆ.
ವಿಧಾನ ಸಭೆಯ ಮುಂಭಾಗ ಆರ್ಜೆಡಿ ನಾಯಕ ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಯುವತಿಯೋರ್ವಳ ಸಜೀವ ದಹನ ಪ್ರಕರಣ ಸಂಬಂಧ ಸದನದ ಹೊರಭಾಗದಲ್ಲಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಇಲ್ಲಿನ ವೈಶಾಲಿ ಜಿಲ್ಲೆಯಲ್ಲಿ ತಿಂಗಳ ಆರಂಭದಲ್ಲಿ 20 ವರ್ಷದ ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಡಲಾಗಿತ್ತು.
ಕಾಂಗ್ರೆಸ್ ಶಾಸಕರ ಪ್ರತಿಭಟನೆ