ಸೂರಜ್ಪುರ (ಛತ್ತೀಸ್ಗಢ): ಮಾವಿನ ಹಣ್ಣು ಕೊಡುವುದಾಗಿ ಆಮಿಷವೊಡ್ಡಿ 12 ವರ್ಷದ ಬಾಲಕನೊಬ್ಬ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ನಡೆದಿದೆ. ನೊಂದ ಬಾಲಕಿ ಅಳುತ್ತಾ ಮನೆಗೆ ಬಂದಿದ್ದು, ಈ ವೇಳೆ ಆಕೆಯ ಆರೋಗ್ಯ ಸರಿಯಿಲ್ಲ ಎಂದು ತಿಳಿದು ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಮರದಿಂದ ಮಾವಿನ ಕಾಯಿ ಕೀಳಲು ಯತ್ನಿಸುತ್ತಿದ್ದಳು. ಈ ವೇಳೆ, 12 ವರ್ಷದ ಬಾಲಕ ಬಂದು ಆಕೆಗೆ ಮಾವು ಕೊಡುವುದಾಗಿ ಆಮಿಷವೊಡ್ಡಿ ತನ್ನೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದ. ಮನೆಯ ಹಿಂದೆ ದನದ ಕೊಟ್ಟಿಗೆಯ ಸ್ಥಳಕ್ಕೆ ಕರೆದೊಯ್ದು ಆಕೆ ಮೇಲೆ ಬಲತ್ಕಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇತ್ತ, ಚೈಲ್ಡ್ ಲೈನ್ ನೆರವಿನ ಆರೋಪಿ ಬಾಲಕನನ್ನು ವಿಚಾರಣೆಗೂ ಒಳಪಡಿಸಿದ್ದಾರೆ.