ನವದೆಹಲಿ: ಕೇಂದ್ರ ಸಚಿವರು, ರಾಜಕಾರಣಿಗಳು ಮತ್ತು ಪತ್ರಕರ್ತರು ಸೇರಿದಂತೆ ಇತರರ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದೆ.
ಭಾರತೀಯ ಪ್ರಜಾಪ್ರಭುತ್ವದ ಅಪಖ್ಯಾತಿಗೆ ನಡೆದ ಪ್ರಯತ್ನವೇ ಫೋನ್ ಹ್ಯಾಕಿಂಗ್: ಕೇಂದ್ರ ಸಚಿವ ವೈಷ್ಣವ್ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸಲು ನಡೆಸುತ್ತಿರುವ ಪ್ರಯತ್ನಗಳಿವು ಎಂದಿದ್ದಾರೆ. ಪ್ರಸ್ತುತ ದೇಶದ ಪ್ರತಿಯೊಂದು ಅಂಶಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮ, ನಿಬಂಧನೆಗಳಿವೆ. ಅಕ್ರಮವಾಗಿ ಫೋನ್ ಹ್ಯಾಕಿಂಗ್ ಮಾಡುವುದು ಅಸಾಧ್ಯ ಎಂದು ಅವರು ಕಲಾಪಕ್ಕೆ ಸ್ಪಷ್ಟಪಡಿಸಿದರು. ಇದೇ ಸಮಯದಲ್ಲಿ ವಿರೋಧ ಪಕ್ಷಗಳು ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಕಲಾಪ ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ನಾಳೆಗೆ ಮುಂದೂಡಿದರು.
ಇದನ್ನೂ ಓದಿ: ಎಸ್‌ಸಿ,ಎಸ್‌ಟಿ,ಹಿಂದುಳಿದ,ರೈತರ ಮಕ್ಕಳು ಸಚಿವರಾಗಿದ್ದು ವಿಪಕ್ಷಕ್ಕೆ ಜೀರ್ಣಿಸಲು ಆಗ್ತಿಲ್ಲ: ಮೋದಿ ವಾಗ್ದಾಳಿ
ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶರು, ಉದ್ಯಮಿಗಳು, ಚಳವಳಿಗಾರರು ಹಾಗೂ 40ಕ್ಕೂ ಅಧಿಕ ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಮಂದಿಯ ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿದ್ದ ಮಾಹಿತಿ ನಿನ್ನೆಯಷ್ಟೇ ಬಹಿರಂಗವಾಗಿತ್ತು.
ಸರ್ಕಾರಕ್ಕೆ ಮಾತ್ರ ಮಾರಾಟ ಮಾಡುವ ಇಸ್ರೇಲ್ ಮೂಲದ ಕಣ್ಗಾವಲು ಕಂಪನಿ ಎನ್ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಈ ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ಒಕ್ಕೂಟ ವರದಿ ಮಾಡಿತ್ತು.