ಬೆಟ್ಟಿಯಾ : ಬಿಹಾರದ ಮೆಕ್ಯಾನಿಕ್ವೊಬ್ಬರು ಬೈಕ್ನ ಇಂಜಿನ್ನಿಂದ ಮಿನಿ ಕ್ಲಾಸಿಕ್ ಜೀಪ್ ತಯಾರಿಸಿದ್ದಾರೆ. 150 ಸಿಸಿ ಎಂಜಿನ್ನ ಜೀಪ್ನಲ್ಲಿ ನಾಲ್ವರು ಕುಳಿತು ಪ್ರಯಾಣಿಸಬಹುದಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ಗೆ 30 ಕಿ.ಮೀ. ದೂರ ಕ್ರಮಿಸುತ್ತದೆ. ಅಲ್ಲದೇ, ಅಂದಾಜು 10 ಕ್ವಿಂಟಾಲ್ ಭಾರದ ಸರಕುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪಟ್ಟಣದ ಮೆಕ್ಯಾನಿಕ್ ಆಗಿರುವ ಲೋಹಾ ಸಿಂಗ್ ಈ ವಿಶೇಷವಾದ ಜೀಪ್ ಸಿದ್ಧಪಡಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಏನಾದರೂ ಹೊಸದನ್ನು ಮಾಡಬೇಕೆಂದು ಯೋಚಿಸಿದ್ದರ ಫಲ ಇದಾಗಿದೆ. ಯೂಟ್ಯೂಬ್ ನೋಡುವಾಗ ಈ ಕ್ಲಾಸಿಕ್ ಜೀಪ್ ಮಾಡುವ ಆಲೋಚನೆ ಮೂಡಿದೆ. ಅಂತೆಯೇ ಲೋಹಾ ಸಿಂಗ್ ಜೀಪ್ ತಯಾರಿಸಲು ಪ್ರಾರಂಭಿಸಿ, ಯೂಟ್ಯೂಬ್ ನೋಡಿಯೇ 50 ದಿನಗಳಲ್ಲಿ ನಾಲ್ಕು ಆಸನಗಳ ಈ ಮಿನಿ ಜೀಪ್ ರಸ್ತೆಗಿಳಿಸಿದ್ದಾರೆ.
ಬೈಕ್ ಇಂಜಿನ್ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್ ಈ ಜೀಪ್ ಒಟ್ಟು 6 ಗೇರ್ಗಳನ್ನು ಹೊಂದಿದೆ. ಇದನ್ನು ಆಟೋಮ್ಯಾಟಿಕ್ ಸ್ಟಾರ್ಟ್ ಮಾಡಬಹುದು. ಇದರ ಪವರ್ ಟಿಲ್ಲರ್ ವೀಲ್ಗಳು ಕಚ್ಚಾ ರಸ್ತೆಗಳು ಮತ್ತು ಜಲಾವೃತ ರಸ್ತೆಗಳಲ್ಲೂ ಸರಾಗವಾಗಿ ಓಡಲಿವೆ. ಇದರಲ್ಲಿ ನಾಲ್ವರು ಪ್ರಯಾಣಿಕರು ಮತ್ತು 10 ಕ್ವಿಂಟಾಲ್ ತೂಕದೊಂದಿಗೆ ಗಂಟೆಗೆ 60 ರಿಂದ 70 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಒಂದು ಲೀಟರ್ ಪೆಟ್ರೋಲ್ 30 ಕಿ.ಮೀ ದೂರ ಹೋಗಬಹುದು. ಈ ಜೀಪ್ ಸಿದ್ಧಪಡಿಸಲು 1.50 ಲಕ್ಷ ರೂ. ವೆಚ್ಚವಾಗಿದೆ ಅಂತಾರೆ ಲೋಹಾ ಸಿಂಗ್.
ಬೈಕ್ ಇಂಜಿನ್ನಿಂದ ಕ್ಲಾಸಿಕ್ ಜೀಪ್ ಸಿದ್ಧಪಡಿಸಿದ ಮೆಕ್ಯಾನಿಕ್ ಈ ಜೀಪ್ ನೋಡಿದ ಗ್ರಾಹಕರು ಖರೀದಿಸಲು ಮುಂದೆ ಬರುತ್ತಿದ್ದಾರೆ. ಆದರೆ, ಇದು ನಾನು ಸಿದ್ಧಪಡಿಸಿದ ಮೊದಲ ಜೀಪ್ ಆಗಿದೆ. ಆದ್ದರಿಂದ ಮಾರಾಟ ಮಾಡುವ ಇಚ್ಛೆ ಇಲ್ಲ. ಆದರೆ, ಮಾರುಕಟ್ಟೆಯಲ್ಲಿ ಜೀಪ್ಗೆ ಬೇಡಿಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಜೀಪ್ ತಯಾರಿಸಿ ಮಾರಾಟ ಮಾಡುವ ಯೋಚನೆ ಇದೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ:ಇಂಡಿಗೋ ವಿಮಾನದ ಪ್ರಯಾಣಿಕನ ಮೊಬೈಲ್ನಲ್ಲಿ ಕಾಣಿಸಿಕೊಂಡ ಬೆಂಕಿ!