ಅನಂತನಾಗ್(ಜಮ್ಮು- ಕಾಶ್ಮೀರ):ಕಾಶ್ಮೀರ ಪಂಡಿತರೊಬ್ಬರ ಮನೆಗೆ ಭದ್ರತೆ ನೀಡಿದ್ದ ಸಿಆರ್ಪಿಎಫ್ ಯೋಧನ ರೈಫಲ್ ಅನ್ನು ಕಸಿದುಕೊಳ್ಳಲು ಉಗ್ರರು ಯತ್ನಿಸಿದ ಘಟನೆ ನಡೆದಿದೆ. ಅನಂತನಾಗ್ ರೇಶಿಬಜಾರ್ನಲ್ಲಿರುವ ಪಂಡಿತರ ಮನೆಗೆ ಅರೆಸೇನಾಪಡೆಯ ಬಿಎಸ್ಎಫ್ ಯೋಧ ಕಾವಲು ಕಾಯುತ್ತಿದ್ದಾಗ ದಾಳಿ ಮಾಡಿ ಉಗ್ರರು ಯೋಧನ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ಬಳಿಕ ಯೋಧನ ರೈಫಲ್ ಕಸಿದುಕೊಳ್ಳಲು ಮುಂದಾಗಿದ್ದಾರೆ.
ಕಾಶ್ಮೀರ ಪಂಡಿತನ ಮನೆ ಭದ್ರತಾ ಸಿಬ್ಬಂದಿಯ ರೈಫಲ್ ಕದಿಯಲು ಉಗ್ರರಿಂದ ಯತ್ನ - ಯೋಧನ ರೈಫಲ್ ಕದಿಯಲು ಯತ್ನ
ಕಾಶ್ಮೀರದಲ್ಲಿ ಪಂಡಿತರಿಗೆ ಜೀವ ಬೆದರಿಕೆ ಬಂದ ಬೆನ್ನಲ್ಲೇ ಅವರ ಭದ್ರತೆಗೆ ಇದ್ದ ಯೋಧನ ರೈಫಲ್ ಅನ್ನು ಕಸಿದುಕೊಳ್ಳುವ ವಿಫಲ ಯತ್ನ ನಡೆದಿದೆ.
ಉಗ್ರರಿಂದ ಯತ್ನ
ಈ ವೇಳೆ ಪ್ರತಿರೋಧ ಒಡ್ಡಿದ ಯೋಧ ತನ್ನನ್ನು ರಕ್ಷಿಸಿಕೊಂಡಿದ್ದಲ್ಲದೇ, ಉಗ್ರರನ್ನು ಓಡಿಸಿದ್ದಾರೆ. ಅಲ್ಲದೇ, ಅಲ್ಲಿದ್ದ ಪೊಲೀಸರು ಕೂಡ ಯೋಧನ ನೆರವಿಗೆ ಬಂದಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕೆಣಕಿದ ಉಗ್ರರು ಪರಾರಿಯಾಗಿದ್ದಾರೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.
TAGGED:
ಯೋಧನ ರೈಫಲ್ ಕದಿಯಲು ಯತ್ನ