ಕರ್ನಾಟಕ

karnataka

ETV Bharat / bharat

"ಕರುಣಾಜನಕ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು" - ವಲಸೆ ಕಾರ್ಮಿಕರ ಗೋಳು

ಹೈದರಾಬಾದ್: ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಡೆ ಭೀಕರವಾಗಿ ಅಪ್ಪಳಿಸುತ್ತಿದೆ. ಜನಸಾಮಾನ್ಯರಾದಿಯಾಗಿ ಎಲ್ಲರೂ ಇದರಿಂದ ಒಂದಿಲ್ಲೊಂದು ರೀತಿಯಲ್ಲಿ ಬಾಧಿತರಾಗಿದ್ದಾರೆ. ಆದರೆ, ತುತ್ತು ಕೂಳಿಗಾಗಿ ಸ್ವಂತ ಊರು ಬಿಟ್ಟು ಅದೆಲ್ಲೋ ನೂರಾರು, ಸಾವಿರಾರು ಕಿಲೋಮೀಟರ್​ ದೂರದ ಊರಿಗೆ ದುಡಿಯಲು ಬಂದಿದ್ದ ವಲಸೆ ಕಾರ್ಮಿಕರ ಸ್ಥಿತಿ ಅತ್ಯಂತ ದೈನೇಸಿಯಾಗಿದೆ. ಎರಡನೇ ಅಲೆಯ ಕೊರೊನಾ ಲಾಕ್​ಡೌನ್​ಗಳಿಂದಾಗಿ ಈ ಕಾರ್ಮಿಕರು ಮತ್ತೊಮ್ಮೆ ಅತಂತ್ರರಾಗಿದ್ದು, ಇವರ ಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಕಳೆದ ವರ್ಷದ ಕೆಟ್ಟ ಅನುಭವಗಳನ್ನು ಮರೆತು ಹೊಸದಾಗಿ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಇವರ ಸಹಾಯಕ್ಕೆ ಈಗ ಯಾರೂ ಬರುತ್ತಿಲ್ಲ. ದೇಶದ ಹಲವಾರು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಸೇರಿದಂತೆ ಇನ್ನೂ ಕೆಲ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುತ್ತಿರುವುದರಿಂದ ವಲಸೆ ಕಾರ್ಮಿಕರು ತಾವು ಕೆಲಸಕ್ಕೆ ಬಂದ ಸ್ಥಳದಲ್ಲಿಯೇ ವಾಸಿಸುವುದು ಕಷ್ಟಕರವಾಗತೊಡಗಿದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳು ನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳು ಸೇರಿದಂತೆ ದೇಶದ ಪ್ರಮುಖ ನಗರಗಳ ರೈಲು ನಿಲ್ದಾಣಗಳಲ್ಲಿ ವಲಸೆ ಕಾರ್ಮಿಕರ ದಂಡೇ ಕಂಡು ಬರುತ್ತಿದೆ. ಹೇಗಾದರೂ ಮಾಡಿ ಮತ್ತೆ ತಮ್ಮ ಊರು ಸೇರಿಕೊಳ್ಳುವ ಧಾವಂತದಲ್ಲಿ ಈ ಕಾರ್ಮಿಕರು ರೈಲು ನಿಲ್ದಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕಳೆದ ವರ್ಷ ಏಕಾಏಕಿ ಕೊರೊನಾ ಲಾಕ್​ಡೌನ್ ಜಾರಿಯಾದಾಗ ವಲಸೆ ಕಾರ್ಮಿಕರು ಇನ್ನಿಲ್ಲದ ಪಡಿಪಾಟಲು ಪಟ್ಟಿದ್ದರು. ಇದ್ದ ಕೆಲಸ ಕಳೆದುಕೊಂಡು, ಮರಳಿ ತಮ್ಮೂರಿಗೂ ಹೋಗಲಾಗದೆ ಉಪವಾಸ, ವನವಾಸ ಅನುಭವಿಸಿದ್ದರು. ಈಗ ರಾಷ್ಟ್ರಾದ್ಯಂತ ಲಾಕ್​ಡೌನ್ ಘೋಷಣೆ ಆಗಿಲ್ಲವಾದರೂ, ಆಯಾ ರಾಜ್ಯಗಳಲ್ಲಿ ಜಾರಿಯಾಗುತ್ತಿರುವ ನಿರ್ಬಂಧಗಳಿಂದ ಸ್ಥಳೀಯವಾಗಿ ಇವರು ನಿರುದ್ಯೋಗಿಗಳಾಗುತ್ತಿದ್ದಾರೆ. ಈಗಾಗಲೇ ಇವರು ತಮ್ಮ ಉಳಿತಾಯದ ಹಣವನ್ನೂ ಖರ್ಚು ಮಾಡಿಕೊಂಡಿದ್ದು, ಬರುವ ದಿನಗಳಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸಾಮಾನ್ಯವಾಗಿ ಕೋಲ್ಕತ್ತಾ, ಮಧ್ಯ ಪ್ರದೇಶ, ಬಿಹಾರ, ಛತ್ತೀಸಗಢ, ಒಡಿಶಾ ಹಾಗೂ ಇನ್ನಿತರ ರಾಜ್ಯಗಳ ಕಾರ್ಮಿಕರು ಜೀವನೋಪಾಯಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಆದರೆ ಇಂಥ ಎಷ್ಟು ಕಾರ್ಮಿಕರು ಅನ್ನ ಹುಡುಕಿಕೊಂಡು ಎಲ್ಲೆಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ರಿಯಲ್ ಎಸ್ಟೇಟ್, ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿ, ಡ್ರೇನೇಜ್ ಹೀಗೆ ಹಲವಾರು ಕೆಲಸಗಳಲ್ಲಿ ಈ ವಲಸೆ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂಥ ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಗಮನಹರಿಸಬೇಕಿದೆ.

Migrant labourers in a pathetic situation
"ಕರುಣಾಜನಕ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು"

By

Published : Apr 29, 2021, 10:39 PM IST

ಹೈದರಾಬಾದ್:ಕೊರೊನಾ ವೈರಸ್​ ಎರಡನೇ ಅಲೆ ಎಲ್ಲೆಡೆ ಭೀಕರವಾಗಿ ಅಪ್ಪಳಿಸುತ್ತಿದೆ. ಜನಸಾಮಾನ್ಯರಾದಿಯಾಗಿ ಎಲ್ಲರೂ ಇದರಿಂದ ಒಂದಿಲ್ಲೊಂದು ರೀತಿಯಲ್ಲಿ ಬಾಧಿತರಾಗಿದ್ದಾರೆ. ಆದರೆ, ತುತ್ತು ಕೂಳಿಗಾಗಿ ಸ್ವಂತ ಊರು ಬಿಟ್ಟು ಅದೆಲ್ಲೋ ನೂರಾರು, ಸಾವಿರಾರು ಕಿಲೋಮೀಟರ್​ ದೂರದ ಊರಿಗೆ ದುಡಿಯಲು ಬಂದಿದ್ದ ವಲಸೆ ಕಾರ್ಮಿಕರ ಸ್ಥಿತಿ ಅತ್ಯಂತ ದೈನೇಸಿಯಾಗಿದೆ. ಎರಡನೇ ಅಲೆಯ ಕೊರೊನಾ ಲಾಕ್​ಡೌನ್​ಗಳಿಂದಾಗಿ ಈ ಕಾರ್ಮಿಕರು ಮತ್ತೊಮ್ಮೆ ಅತಂತ್ರರಾಗಿದ್ದು, ಇವರ ಕಷ್ಟಗಳಿಗೆ ಕೊನೆಯೇ ಇಲ್ಲದಂತಾಗಿದೆ. ಕಳೆದ ವರ್ಷದ ಕೆಟ್ಟ ಅನುಭವಗಳನ್ನು ಮರೆತು ಹೊಸದಾಗಿ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಇವರ ಸಹಾಯಕ್ಕೆ ಈಗ ಯಾರೂ ಬರುತ್ತಿಲ್ಲ.

ದೇಶದ ಹಲವಾರು ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಸೇರಿದಂತೆ ಇನ್ನೂ ಕೆಲ ಕಠಿಣ ನಿರ್ಬಂಧಗಳನ್ನು ಜಾರಿ ಮಾಡುತ್ತಿರುವುದರಿಂದ ವಲಸೆ ಕಾರ್ಮಿಕರು ತಾವು ಕೆಲಸಕ್ಕೆ ಬಂದ ಸ್ಥಳದಲ್ಲಿಯೇ ವಾಸಿಸುವುದು ಕಷ್ಟಕರವಾಗತೊಡಗಿದೆ. ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳು ನಾಡು, ಕರ್ನಾಟಕ, ತೆಲಂಗಾಣ ರಾಜ್ಯಗಳು ಸೇರಿದಂತೆ ದೇಶದ ಪ್ರಮುಖ ನಗರಗಳ ರೈಲು ನಿಲ್ದಾಣಗಳಲ್ಲಿ ವಲಸೆ ಕಾರ್ಮಿಕರ ದಂಡೇ ಕಂಡು ಬರುತ್ತಿದೆ. ಹೇಗಾದರೂ ಮಾಡಿ ಮತ್ತೆ ತಮ್ಮ ಊರು ಸೇರಿಕೊಳ್ಳುವ ಧಾವಂತದಲ್ಲಿ ಈ ಕಾರ್ಮಿಕರು ರೈಲು ನಿಲ್ದಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಕಳೆದ ವರ್ಷ ಏಕಾಏಕಿ ಕೊರೊನಾ ಲಾಕ್​ಡೌನ್ ಜಾರಿಯಾದಾಗ ವಲಸೆ ಕಾರ್ಮಿಕರು ಇನ್ನಿಲ್ಲದ ಪಡಿಪಾಟಲು ಪಟ್ಟಿದ್ದರು. ಇದ್ದ ಕೆಲಸ ಕಳೆದುಕೊಂಡು, ಮರಳಿ ತಮ್ಮೂರಿಗೂ ಹೋಗಲಾಗದೆ ಉಪವಾಸ, ವನವಾಸ ಅನುಭವಿಸಿದ್ದರು. ಈಗ ರಾಷ್ಟ್ರಾದ್ಯಂತ ಲಾಕ್​ಡೌನ್ ಘೋಷಣೆ ಆಗಿಲ್ಲವಾದರೂ, ಆಯಾ ರಾಜ್ಯಗಳಲ್ಲಿ ಜಾರಿಯಾಗುತ್ತಿರುವ ನಿರ್ಬಂಧಗಳಿಂದ ಸ್ಥಳೀಯವಾಗಿ ಇವರು ನಿರುದ್ಯೋಗಿಗಳಾಗುತ್ತಿದ್ದಾರೆ. ಈಗಾಗಲೇ ಇವರು ತಮ್ಮ ಉಳಿತಾಯದ ಹಣವನ್ನೂ ಖರ್ಚು ಮಾಡಿಕೊಂಡಿದ್ದು, ಬರುವ ದಿನಗಳಲ್ಲಿ ಒಪ್ಪತ್ತಿನ ಊಟಕ್ಕೂ ಪರದಾಡುವಂತಾಗಿದೆ.

ಸಾಮಾನ್ಯವಾಗಿ ಕೋಲ್ಕತ್ತಾ, ಮಧ್ಯ ಪ್ರದೇಶ, ಬಿಹಾರ, ಛತ್ತೀಸಗಢ, ಒಡಿಶಾ ಹಾಗೂ ಇನ್ನಿತರ ರಾಜ್ಯಗಳ ಕಾರ್ಮಿಕರು ಜೀವನೋಪಾಯಕ್ಕಾಗಿ ಬೇರೆ ಕಡೆಗೆ ವಲಸೆ ಹೋಗುತ್ತಾರೆ. ಆದರೆ ಇಂಥ ಎಷ್ಟು ಕಾರ್ಮಿಕರು ಅನ್ನ ಹುಡುಕಿಕೊಂಡು ಎಲ್ಲೆಲ್ಲಿಗೆ ಹೋಗುತ್ತಾರೆ ಎಂಬ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ. ರಿಯಲ್ ಎಸ್ಟೇಟ್, ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿ, ಡ್ರೇನೇಜ್ ಹೀಗೆ ಹಲವಾರು ಕೆಲಸಗಳಲ್ಲಿ ಈ ವಲಸೆ ಕಾರ್ಮಿಕರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇಂಥ ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತಾಗಿ ಗಮನಹರಿಸಬೇಕಿದೆ.

ABOUT THE AUTHOR

...view details