ಕರ್ನಾಟಕ

karnataka

ETV Bharat / bharat

ತೃತೀಯ ಲಿಂಗಿಗಳಿಗೆ ಸಿಹಿ ಸುದ್ದಿ. ಹೈಕೋರ್ಟ್​ನ ಮಹತ್ವದ ತೀರ್ಪು ಒಪ್ಪಿದ ಸರ್ಕಾರ

ಫೆಬ್ರವರಿ 2023 ರ ವೇಳೆಗೆ, ರಾಜ್ಯ ಸರ್ಕಾರವು ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಯಮವನ್ನು ಮಾಡಲಿದೆ. ಡಿಸೆಂಬರ್ 13 ರಿಂದ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಡ್ರೈವರ್ ಹುದ್ದೆಗೆ ಈ ಆಯ್ಕೆಯನ್ನು ಲಭ್ಯಗೊಳಿಸಲಾಗಿದ್ದು, ತೃತೀಯ ಲಿಂಗಿಗಳು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Transgender
ತೃತೀಯ ಲಿಂಗಿಗಳಿಗೆ ಸಿಹಿ ಸುದ್ದಿ

By

Published : Dec 13, 2022, 1:39 PM IST

ಮಹಾರಾಷ್ಟ್ರ (ಮುಂಬೈ):ಪೊಲೀಸ್ ನೇಮಕಾತಿ ಸಂಬಂಧಿಸಿ ಬಾಂಬೆ ಹೈಕೋರ್ಟ್ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನೆಂದರೆ ಇನ್ಮುಂದೆ ತೃತೀಯ ಲಿಂಗಿಗಳಿಗೂ ಪೊಲೀಸ್ ನೇಮಕಾತಿಯಲ್ಲಿ ಅವಕಾಶ ಲಭ್ಯವಾಗಲಿದೆ. ಹೈಕೋರ್ಟ್​ನ ಈ ತೀರ್ಪಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ನ್ಯಾಯಾಲಯವು ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪರಿಷ್ಕರಿಸಲು ಸರ್ಕಾರಕ್ಕೆ ಆದೇಶಿಸಿತು.

ಹಾಗಾಗಿ ಫೆಬ್ರವರಿ 2023 ರ ವೇಳೆಗೆ, ರಾಜ್ಯ ಸರ್ಕಾರವು ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ನಿಯಮವನ್ನು ಮಾಡಲಿದೆ. ಡಿಸೆಂಬರ್ 13 ರಿಂದ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಡ್ರೈವರ್ ಹುದ್ದೆಗೆ ಈ ಆಯ್ಕೆಯನ್ನು ಲಭ್ಯಗೊಳಿಸಲಾಗಿದ್ದು, ತೃತೀಯ ಲಿಂಗಿಗಳೂ ಸಹ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ಸಂಬಂಧ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು, ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬಾಂಬೆ ಹೈಕೋರ್ಟ್‌ನ ಆದೇಶದ ಪ್ರಕಾರ ಪೊಲೀಸ್ ರಿಕ್ರೂಟ್‌ಮೆಂಟ್ 2022 mahait.org ವೆಬ್‌ಸೈಟ್‌ನಲ್ಲಿ ತೃತೀಯ ಲಿಂಗಿಗಗಳು ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಲಭ್ಯವಾಗುವಂತೆ ಮಾಡಲಾಗಿದೆ. ಪೊಲೀಸ್ ನೇಮಕಾತಿ 2021 ರ ವೆಬ್‌ಸೈಟ್​ನಲ್ಲೇ ಅವರಿಗಾಗಿ ಆಯ್ಕೆಗಳನ್ನು ಒದಗಿಸುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕರು, ತರಬೇತಿ ಮತ್ತು ವಿಶೇಷ ದಳಗಳ ಇಲಾಖೆಯ ಸಂಜಯ್ ಕುಮಾರ್ ತಿಳಿಸಿದ್ದಾರೆ.

ನ್ಯಾಯಾಲಯದ ಹೊಸ ಆದೇಶದ ನಂತರ, ರಾಜ್ಯಾದ್ಯಂತ ತೃತೀಯ ಲಿಂಗದ ವ್ಯಕ್ತಿಗಳು ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಮೊದಲು ಈ ಹುದ್ದೆಗಳಿಗೆ ಪುರುಷರು ಮತ್ತು ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಿತ್ತು. ಆದರೆ ಇದರ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ನಂತರ, ಈ ಸಂಬಂಧ ವಿಚಾರಣೆ ನಡೆಸಲಾಯಿತು. ಈ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ಪೀಠವು ಮೂರನೇ ಲಿಂಗದ ವ್ಯಕ್ತಿಗಳ ಪರವಾಗಿ ತೀರ್ಪು ನೀಡಿತು.

ಇದನ್ನೂ ಓದಿ:ಹಳೆಯ ಪಿಂಚಣಿ ಯೋಜನೆ ಮರುಜಾರಿ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ: ಸಚಿವ ಭಾಗವತ್

ABOUT THE AUTHOR

...view details